ಬೆಳಗಾವಿ: ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ‘ನಿತ್ಯ’ ಎಂಬ ಹೆಣ್ಣು ಹುಲಿ ಆಗಮನವಾಗಿದೆ. ಇದರೊಂದಿಗೆ ಮೃಗಾಲಯದ ಗಾಂಭೀರ್ಯ ಮತ್ತಷ್ಟು ಹೆಚ್ಚಾಗಿದೆ.

‘ಮೃಗಾಲಯದ ಪ್ರಾಣಿ ವಿನಿಮಯ’ ಕಾರ್ಯಕ್ರಮದಡಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ 12 ವರ್ಷದ ಈ ಹೆಣ್ಣು ಹುಲಿ ತರಲಾಗಿದೆ’ ಎಂದು ಮೃಗಾಲಯದ ಆರ್ಎಫ್ಒ ಪವನ್ ಕುರನಿಂಗ ತಿಳಿಸಿದ್ದಾರೆ.

ಇದೇ ಫೆ.27ರಂದು 15 ವರ್ಷ ವಯಸ್ಸಿನ ‘ನಿರುಪಮಾ’ ಹೆಸರಿನ ಸಿಂಹ ಬಹು ಅಂಗಾಂಗ ವೈಫಲ್ಯ ಮತ್ತು ವೃದ್ಧಾಪ್ಯದಿಂದ ಮೃತಪಟ್ಟಿತ್ತು. ಬನ್ನೇರುಘಟ್ಟ ಮೃಗಾಲಯದಿಂದ 2021ರಲ್ಲಿ ಭೂತರಾಮನ ಹಟ್ಟಿಯ ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದ್ದ ‘ನಿರುಪಮಾ’ ಸಾವಿನ ನಂತರ ಆಕೆಯ ಸ್ಥಾನವನ್ನು ತುಂಬಲು ‘ಬೃಂಗಾ’ ಎಂಬ ಸಿಂಹಿಣಿಯನ್ನು ಕರೆತರಲಾಗಿದೆ.

9 ವರ್ಷದ ಬಂಗಾ ಕೂಡ ಬನ್ನೇರುಘಟ್ಟ ಮೃಗಾಲಯದಲ್ಲಿ ಬೆಳೆದ ಸಿಂಹಿಣಿ. ಸದ್ಯ ಆಕೆಯ ಕ್ವಾರಂಟೈನ್ ಅವಧಿ ಮುಗಿದಿದ್ದು ಸಾರ್ವಜನಿಕರ ವೀಕ್ಷಣೆಗೆ ಹೊರಗೆ ಬಿಡಲಾಗಿದೆ.

ಮೂರು ಹುಲಿ: 2024ರ ನವೆಂಬರ್ 24ರಂದು ‘ಶೌರ್ಯ’ ಎಂಬ ಗಂಡು ಹುಲಿ ಕೂಡ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ. ರಕ್ತದಲ್ಲಿ ಕಂಡುಬರುವ ಮೈಕೋಪ್ಲಾಸ್ಮಾ, ಬೇಬಿಸಿಯೋಸಿಸ್ ಮತ್ತು ಸೈಟಾಕ್ಝೋನೋಸಿಸ್ ಎಂಬ ಅಪರೂಪದ ಕಾಯಿಲೆಯಿಂದ 13 ವರ್ಷ ವಯಸ್ಸಿನ ಗಂಡು ಹುಲಿ ಬಳಲುತ್ತಿತ್ತು. ಆ ಹುಲಿ ಸಾವಿನ ಬಳಿಕ ಎರಡು ಹುಲಿಗಳು ಮಾತ್ರ ಇದ್ದವು.

ಇದೀಗ ‘ನಿತ್ಯಾ’ ಎಂಬ ಗಂಭೀರ ವದನೆ ಮೃಗಾಲಯಕ್ಕೆ ಅತಿಥಿಯಾಗಿದ್ದಾಳೆ. ಆಕೆಯ ಸೊಬಗನ್ನು, ಆಟ– ಅರ್ಭಟ– ಓಡಾಟಗಳನ್ನು ನೋಡಲು ಪ್ರವಾಸಿಗರು ಕಾತರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.