ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ತೆಲಸಂಗದಲ್ಲಿ ಟಿಪ್ಪು ಜಯಂತಿ ಆಚರಣೆ

Last Updated 10 ನವೆಂಬರ್ 2019, 13:21 IST
ಅಕ್ಷರ ಗಾತ್ರ

ತೆಲಸಂಗ: ‘ಮೈಸೂರನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಪ್ಪಟ ದೇಶಭಕ್ತ’ ಎಂದು ಮುಸ್ಲಿಂ ಮುಖಂಡ ಅಪ್ಪು ಜಮಾದರ ಹೇಳಿದರು.

ಭಾನುವಾರ ಗ್ರಾಮದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಅಂಗವಾಗಿ ಅವರ ಫೋಟೊಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದನಿ ಎತ್ತಿದ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬರು. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ, ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದರು. ಇಂತಹ ಉದಾತ್ತ ವ್ಯಕ್ತಿತ್ವದ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸುವುದು ರಾಜಕೀಯಪ್ರೇರಿತವಾಗಿದೆ. ನಿಜವಾದ ದೇಶಭಕ್ತನನ್ನು ಮತಾಂಧ ಎನ್ನುವುದು, ಶಾಲಾ ಪಠ್ಯದಿಂದ ಅವರ ಕುರಿತ ಪಠ್ಯವನ್ನು ಕೈಬಿಡುವುದು ದುರದುಷ್ಟಕರ. ಸತ್ಯಕ್ಕಾಗಿ ಟಿಪ್ಪು ಬಗ್ಗೆ ಮತ್ತೊಮ್ಮೆ ಸಂಶೋಧನೆ ನಡೆಯಲಿ’ ಎಂದರು.

ಮೈಸೂರಿನ ಮುಖಂಡ ಸಿದ್ದಾರ್ಥ ಮಾತನಾಡಿ, ‘ರಾಷ್ಟ್ರ ನಾಯಕರನ್ನು ಒಂದು ಕೋಮಿಗೆ ಸೀಮಿತಗೊಳಿಸುವುದು ಸರಿಯಲ್ಲ. ಟಿಪ್ಪು ಅವರ ವ್ಯಕ್ತಿತ್ವ ಎಲ್ಲ ಜನಾಂಗದ ಯುವಕರಿಗೆ ಮಾದರಿಯಾಗಿದೆ. ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗೆ ಮತ ನೀಡುವ ಮೂಲಕ ಕೋಮವಾದಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

ಅಂಜುಮನ್ ಕಮಿಟಿ ಅಧ್ಯಕ್ಷ ಹಾಸೀಂಪೀರ ಮುಜಾವರ, ವಕೀಲ ಯುಸೂಫ್ ಮುಜಾವರ, ಪದ್ದು ಮುಲ್ಲಾ, ಗಪೂರ ಮುಲ್ಲಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT