ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಆರೋಗ್ಯ ಸಿಬ್ಬಂದಿಗೆ ತರಬೇತಿಗೆ ಯೋಜನೆ

Last Updated 13 ಮೇ 2020, 14:51 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್-19 ಹೆ‌ಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಆರ್ಟಿಸ್ಟ್‌ (ಏಷ್ಯನ್ ರಿಸರ್ಚ್‌ ಅಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್‌ಫರ್) ಸಹಯೋಗದಲ್ಲಿ ರಾಜ್ಯದಾದ್ಯಂತ ಆರೋಗ್ಯಸೇವಾ ಕಾರ್ಯಕರ್ತರ ಸಾಮರ್ಥ್ಯವೃದ್ಧಿಗೆ ಯೋಜನೆ ರೂಪಿಸಿದೆ.

20 ದಿನಗಳ ಕಾರ್ಯಕ್ರಮ ಇದಾಗಿದ್ದು, ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆಯ ಮೂಲಕ ಎಲ್ಲ ಆಸ್ಪತ್ರೆಗಳಲ್ಲೂ ಯೋಜನೆ ಜಾರಿಗೊಳ್ಳಲಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯಲ್ಲಿ ತೊಡಗಿರುವ ಆರೋಗ್ಯ ಸೇವಾ ಕಾರ್ಯಕರ್ತರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಶುಶ್ರೂಷಕ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗೆ ತರಬೇತಿ ನಡೆಯಲಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ, ಅಂದರೆ 90 ನಿಮಿಷದಲ್ಲಿ ತರಬೇತಿ ನೀಡಲಾಗುವುದು. ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಾಗಲಿದೆ.

‘ರೋಗಿಗಳ ಪರೀಕ್ಷೆ, ಪ್ರವೇಶದ್ವಾರದಲ್ಲಿ ಭೇಟಿ ನೀಡುವವರು ಹಾಗೂ ರೋಗದ ಮುನ್ಸೂಚನೆ ಒಳಗೊಂಡ ರೋಗಿಗಳನ್ನು ಪ್ರತ್ಯೇಕವಾಗಿಸುವುದು, ಸ್ವಚ್ಛತೆಯ ನಿಯಮಗಳು, ಪಿಪಿಇ ಬಳಸುವ ರೀತಿ, ಮರುಬಳಕೆಯ ಶಿಷ್ಟಾಚಾರ, ಪ್ರಸೂತಿ ಗೃಹ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಯ ನಿರ್ವಹಣೆಯ ಮಾನದಂಡಗಳು, ವಿಭಾಗಗಳ ನಿರ್ವಹಣೆ, ಬಿಡುಗಡೆ ಮತ್ತು ಫಾಲೋಅಪ್, ಭೇಟಿಯ ಅವಧಿ ಮತ್ತು ದೂರ ಸಂವಹನಗಳನ್ನು ವಿಡಿಯೊ ಪ್ರಾತ್ಯಕ್ಷಿಕೆ ಮೂಲಕ ಒದಗಿಸಲಾಗುತ್ತದೆ. ಆರ್ಟಿಸ್ಟ್ ತಂಡದಿಂದ ಪ್ರತಿನಿತ್ಯ ಆನ್‌ಲೈನ್ ತರಬೇತಿ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಇದರ ನೇತೃತ್ವವನ್ನು ಸ್ತ್ರೀರೋಗ ತಜ್ಞೆ ಡಾ.ಹೇಮಾ ದಿವಾಕರ ವಹಿಸಿಕೊಂಡಿದ್ದಾರೆ’ ಎಂದು ಕೆಎಸ್‌ಒಜಿಎ ಅಧ್ಯಕ್ಷೆ ಬೆಳಗಾವಿಯ ಡಾ.ಶೋಭನಾ ಪಟ್ಟೆದ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಹಾಗೂ ಡಾ.ಹೇಮಾ ದಿವಾಕರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT