ಸೋಮವಾರ, ಫೆಬ್ರವರಿ 17, 2020
30 °C

ಮಹಿಳೆಯರಿಗೆ ವಚನ ಸಂಗೀತ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಮಹಿಳೆಯರಿಗಾಗಿ ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿರುವ ವಚನ ಸಂಗೀತ ಶಿಬಿರಕ್ಕೆ ಚಾಲನೆ ದೊರೆತಿದೆ.

ಉದ್ಘಾಟಿಸಿದ ಸಂಗೀತ ವಿದ್ವಾಂಸ ವಿಜಯಕುಮಾರ ತೇಲಿ ಅವರು ಸಂಗೀತ ಕಲೆಯ ಸ್ವರೂಪ, ಉದ್ದೇಶ, ಪ್ರಯೋಜನಗಳೊಂದಿಗೆ ವಿವಿಧ ಸಂಗೀತ ಪ್ರಕಾರಗಳ ಶಾಸ್ತ್ರೀಯ ವಿವರಣೆಯನ್ನು ನೀಡಿದರು. 40 ಶಿಬಿರಾರ್ಥಿಗಳ ಧ್ವನಿ ಪರೀಕ್ಷೆ ಮಾಡಿದರು. ಶಿಬಿರದ ಮುಂದಿನ ಹತ್ತು ದಿನಗಳಲ್ಲಿ ಶರಣರ ವಚನ, ರಂಗ ಗೀತೆ, ಜನಪದ ಗೀತೆಗಳನ್ನು, ತಾಳ ಲಯ ಸ್ವರೂಪ ಸಂಯೋಜನೆ, ವಾದ್ಯಗಳೊಂದಿಗೆ ಕಲಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ‘ಮಹಿಳೆಯರಿಗೆ ನೀಡುತ್ತಿರುವ ಸಂಗೀತ ಸಂಸ್ಕಾರವು ಇಂದಿನ ಅಗತ್ಯವಾಗಿದೆ. ಸಂಗೀತವು ಮನಸ್ಸು ಹಾಗೂ ಭಾವನೆಗಳನ್ನು ತಿಳಿಗೊಳಿಸುತ್ತದೆ. ವಚನ ಸಂಗೀತ ಶಿಬಿರ ಆಯೋಜಿಸುವ ಮೂಲಕ ಸಂಗೀತದ ಅಭಿರುಚಿಯನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ’ ಎಂದರು.

ಮಹಾಸಭಾದ ಉಪಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ, ಕಾರ್ಯದರ್ಶಿ ಪ್ರೊ.ಎ.ಬಿ. ಕೊರಬು ಇದ್ದರು.

ಜ್ಯೋತಿ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾ ಕಳ್ಳಿಮಠ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು