ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಫುಟ್‌ಬಾಲ್‌ ಅಕಾಡೆಮಿಗೆ ಬಹುಮಾನ

Last Updated 28 ಅಕ್ಟೋಬರ್ 2019, 13:04 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಿಜಯ ಫುಟ್‌ಬಾಲ್‌ ಅಕಾಡೆಮಿ ತಂಡದವರು ಗೋವಾದ ಮಾಪುಸಾದಲ್ಲಿ ಈಚೆಗೆ ನಡೆದ ಅಖಿಲ ಭಾರತ 8–ಎ ಫುಟ್‌ಬಾಲ್‌ ಟೂರ್ನಿಯಲ್ಲಿ (ಗೋವಾ ಚಾಂಪಿಯನ್‌ ಕಪ್‌– 2019) 14 ವರ್ಷ ವಯಸ್ಸಿನ ಬಾಲಕರ ವಿಭಾಗದಲ್ಲಿ ವಿಜೇತರಾಗಿ ಹೊರಹೊಮ್ಮಿದರು.

ಮುಂಬೈ ತಂಡದವರ ವಿರುದ್ಧ 3–2 ಗೋಲುಗಳಿಂದ ಗೆಲುವು ಸಾಧಿಸಿ ಟ್ರೋಫಿ ಗೆದ್ದುಕೊಂಡರು. ರೆಹಾನ್‌ ಕಿಲ್ಲೇದಾರ, ಮಸೂದ್ ಮುಜಾವರ, ಯಶ್‌ ಚಿಕೋರ್ಡೆ ತಲಾ ಒಂದು ಗೋಲು ಗಳಿಸಿದರು.

ಬೆಂಗಳೂರು ಸಾಕರ್‌ ಅಕಾಡೆಮಿ ಹಾಗೂ ಗೋವಾ ಫುಟ್‌ಬಾಲ್‌ ಸಂಘದಿಂದ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಬೆಂಗಳೂರು, ತಮಿಳುನಾಡು, ಗೋವಾ, ಮುಂಬೈ, ಕೇರಳ ಹಾಗೂ ಬೆಳಗಾವಿ ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು. ಲೀಗ್‌ ಮತ್ತು ನಾಕ್‌ಔಟ್‌ ಪಂದ್ಯಗಳು ನಡೆದವು.

ವಿಜಯ ಫುಟ್‌ಬಾಲ್‌ ಅಕಾಡೆಮಿಯವರು ಲೀಗ್‌ ಹಂತದಲ್ಲಿ 2 ಪಂದ್ಯಗಳಲ್ಲಿ ಗೆದ್ದಿದ್ದರು. ಒಂದು ಪಂದ್ಯ ಡ್ರಾ ಆಗಿತ್ತು. ಮೊದಲ ಪಂದ್ಯದಲ್ಲಿ ಗೋವಾ ಫುಟ್‌ಬಾಲ್‌ ಸಂಘದ ವಿರುದ್ಧ 6–0, 2ನೇ ಪಂದ್ಯದಲ್ಲಿ ಬೆಂಗಳೂರು ಅಕಾಡೆಮಿ ವಿರುದ್ಧ 2–0 ಗೋಲುಗಳಿಂದ ಗೆದ್ದಿದ್ದರು. 3ನೇ ಪಂದ್ಯದಲ್ಲಿ ಕೊಯಮತ್ತೂರು ತಂಡದ ವಿರುದ್ಧ ಡ್ರಾ (0–0) ಸಾಧಿಸಿದ್ದರು. ಸೆಮಿ ಫೈನಲ್‌ನಲ್ಲಿ ಬೆಂಗಳೂರಿನ ಬೊಯ್ಕಾ ಅಕಾಡೆಮಿ ವಿರುದ್ಧ 2–0 ಗೋಲುಗಳಿಂದ ಗೆದ್ದಿದ್ದರು.

ರೆಹಾನ್‌ ಕಿಲ್ಲೇದಾರ ಟೂರ್ನಿಯ ಅತ್ಯುತ್ತಮ ಆಟಗಾರ ಎನಿಸಿದರು. ತಂಡಕ್ಕೆ ರವಿ ಮಾಲ್‌ಶೇಟ್ ಹಾಗೂ ಎಂ. ನಾಯಕ್‌ ತರಬೇತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT