ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಮರೆತು ಪೆನ್‌ಡ್ರೈವ್‌ ನೆಚ್ಚಿಕೊಂಡ ಕಾಂಗ್ರೆಸ್‌: ವಿಜಯೇಂದ್ರ

Published 4 ಮೇ 2024, 23:41 IST
Last Updated 4 ಮೇ 2024, 23:41 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಗ್ಯಾರಂಟಿ ಬಿಟ್ಟು ಪೆನ್‌ಡ್ರೈವ್ ಪ್ರಕರಣದಿಂದಲೇ ಚುನಾವಣೆಯಲ್ಲಿ ಗೆಲ್ಲುವ ಉಮೇದಿನಲ್ಲಿ ಇರುವ ಕಾಂಗ್ರೆಸ್‌ನವರಿಗೆ ಜನ ತಕ್ಕ ಪಾಠ ಕಲಿಸುವರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಲೈಂಗಿಕ ದೌರ್ಜನ್ಯ ಪ್ರಕರಣ ಬಿಜೆಪಿಗೆ ಮುಳುವಾಗಲಿ ಎಂಬ ಅಪೇಕ್ಷೆ ಕಾಂಗ್ರೆಸ್‌ದ್ದು. ಅದಕ್ಕೆ ಗ್ಯಾರಂಟಿ ಬಗ್ಗೆ ವಿಶ್ವಾಸ ಕಳೆದುಕೊಂಡು, ಪೆನ್‌ಡ್ರೈವ್ ನೆಚ್ಚಿಕೊಂಡಿದ್ದಾರೆ’ ಎಂದರು.

‘ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಿಲುವು ಸ್ಪಷ್ಟ. ಯಾರೇ ತಪ್ಪಿತಸ್ಥರಿದ್ದರೂ ತನಿಖೆ ಎದುರಿಸಬೇಕು. ಇದರಲ್ಲಿ ಬೇರೆ ಮಾತಿಲ್ಲ’ ಎಂದರು.

‘ಅಪಪ್ರಚಾರ ಮತ್ತು ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟುಕೊಂಡ ಕಾಂಗ್ರೆಸ್‌ನವರು 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಮತದಾರರು ಅವರ ಅಪಪ್ರಚಾರದ ಬಗ್ಗೆ ತಲೆ‌ಕೆಡಿಸಿಕೊಳ್ಳಲ್ಲ. 28 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ’ ಎಂದರು.

‘ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬರುತ್ತದೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಮೋದಿ ಈಡೇರಿಸಿದ್ದಾರೆ. ಅವರ ಜ‌ನಪ್ರಿಯತೆ ಹೆಚ್ಚಿದ್ದು, ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT