ಶನಿವಾರ, ಜನವರಿ 18, 2020
26 °C

ಯುವಕರು ಕಡ್ಡಾಯವಾಗಿ ಮತದಾನ ಮಾಡಲಿ: ಪ್ರೊ.ಸಾಗರ ಕಟಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘18 ವರ್ಷ ಪೂರೈಸಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ತಪ್ಪದೇ ಮತದಾನ ಮಾಡಬೇಕು’ ಎಂದು ಪ್ರೊ.ಸಾಗರ ಕಟಗೇರಿ ತಿಳಿಸಿದರು.

ಇಲ್ಲಿನ ಜಾಧವಜಿ ಶಿಕ್ಷಣ ಸಂಸ್ಥೆಯ ಕೆ.ಎ. ಲೋಕಾಪೂರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಿಂದ ಸೋಮವಾರ ನಡೆದ ಮತದಾರರ ಮಿಂಚಿನ ನೋಂದಣಿ ಅಭಿಯಾನದಲ್ಲಿ ಅವರು ಮಾತನಾಡಿದರು.

800 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕಾಲೇಜಿನಿಂದ ಗಣಪತಿ ಗುಡಿ, ಅಂಬೇಡ್ಕರ್‌ ವೃತ್ತ, ಮುರುಘೇಂದ್ರ ಬ್ಯಾಂಕ್‌, ಬಸವೇಶ್ವರ ವೃತ್ತದಲ್ಲಿ ಜಾಥಾ ನಡೆಸಿದರು.

ಕಾಲೇಜಿನ ಅರ್ಚನಾ ಪೂಜಾರಿ, ಗಿರೀಶ ಕುಲಕರ್ಣಿ, ರಾಮಚಂದ್ರ ನಾಯಿಕ, ಡಿ.‍ಪಿ. ಕರಡಿ, ಎಂ.ಡಿ. ಹಜಾರೆ, ಪ್ರಶಾಂತ ಚನ್ನರೆಡ್ಡಿ, ಜಿ.ಎ. ದೀಕ್ಷಿತ್‌, ಬಿ.ಪಿ. ಗುಂಡ, ನಿಶಾ ವಾಗಮೋಡೆ, ಜ್ಯೋತಿ ಕಿತ್ತೂರ, ವಿ.ಪಿ. ಜಾಲಿಹಾಳ, ಸನಾಉಲ್ಲಾ ನಾಗರಬಾವಡಿ, ಎಂ.ಜಿ. ನಾಯಿಕ, ಎಂ.ಡಿ. ಗುಡ್ಡಾಪೂರ, ಸಂತೋಷ ಬಡಕಂಬಿ, ಅನಿಲ ತಳಕೇರಿ, ರಾಜುಕುಮಾರ ಕಾಂಬಳೆ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು