ಜಾಗೃತಿಗೆ ‘ಮತದಾನದ ಕರೆಯೋಲೆ’

ಶನಿವಾರ, ಏಪ್ರಿಲ್ 20, 2019
31 °C

ಜಾಗೃತಿಗೆ ‘ಮತದಾನದ ಕರೆಯೋಲೆ’

Published:
Updated:
Prajavani

ಚಿಕ್ಕೋಡಿ: ಭಾರತ ಮಾತೆಯ ಸುಪುತ್ರ ‘ಮತದಾರ’ನಿಗೂ ಮತ್ತು ಎಲ್ಲರ ಪ್ರೀತಿಯ ಸುಪುತ್ರಿ ‘ಪ್ರಜಾಪ್ರಭುತ್ವ’ಳಿಗೂ ಚುನಾವಣಾ ಆಯೋಗ ಏ. 23ರಂದು ಮದುವೆ ನಿಶ್ವಯಿಸಿದೆ. ಪ್ರತಿಯೊಬ್ಬರೂ ಅಮೂಲ್ಯವಾದ ‘ಮತದಾನ’ ಮಾಡಿ ಆಡಳಿತ ವ್ಯವಸ್ಥೆ ಬಲಪಡಿಸಿ..!

ಹೀಗೆಂದು ತಾಲ್ಲೂಕಿನ ಕಾಡಾಪುರ ಗ್ರಾಮ ಪಂಚಾಯ್ತಿಯು ‘ಮತದಾನದ ಮಮತೆಯ ಕರೆಯೋಲೆ’ಯ ಕರಪತ್ರದ ಮೂಲಕ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುತ್ತಿದೆ.

ಮತದಾನದ ಮಮತೆಯ ಕರೆಯೋಲೆ ಎಂದು ಕರಪತ್ರ ಮುದ್ರಿಸಿರುವ ಗ್ರಾಮ ಪಂಚಾಯ್ತಿಯು ಮನೆ ಮನೆಗೆ ಹಂಚಿ ಮತದಾನ ಮಹತ್ವ ತಿಳಿಸುತ್ತಿದೆ. ಚುನಾ ವಣೆ ಆಯೋಗ ನಿಶ್ಚಯಿಸಿದಂತೆ 23 ರಂದು ಮತದಾರನಿಗೂ ಮತ್ತು ಪ್ರಜಾಪ್ರಭುತ್ವಕ್ಕೂ ಮದುವೆ ನೇರವೇರಲಿದ್ದು, ಗ್ರಾಮದ ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಡೆಯಲಿರುವ ಈ ಶುಭ ಕಾರ್ಯದಲ್ಲಿ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು. ‌

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿದು, ಜನರಿಂದ ಜನರಿಗೋಸ್ಕರ ಸಂವಿಧಾನಬದ್ಧ ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.

ಉಡುಗೊರೆ ಇರುವುದಿಲ್ಲ. ಹಣ, ಹೆಂಡ ಇತರೆ ದುಷ್ಟ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿದರೆ ಅದೇ ನಿಮ್ಮ ಉಡುಗೊರೆ, ಆಶೀರ್ವಾದ ಎಂಬ ವಿಶೇಷ ಸೂಚನೆಯನ್ನೂ ಕರಪತ್ರದಲ್ಲಿ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕರಪತ್ರವನ್ನು ಹರಿಬಿಡಲಾಗಿದೆ.

‘ಗ್ರಾಮದ ತೋಪಪಟ್ಟಿಯ ನಿವಾಸಿಗಳಿಗೆ ಮತದಾನದ ಮಮತೆಯ ಕರೆಯೋಲೆ ಹಂಚಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪಿಡಿಒ ಆರ್.ಕೆ.ಮಾನೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !