ಶನಿವಾರ, ಅಕ್ಟೋಬರ್ 24, 2020
22 °C

ಹೆದರುವಂತೆ ಡಿಕೆಶಿಗೆ ಹೇಳಿಲ್ಲ: ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿಸಿರುವುದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಶಿವಕುಮಾರ್‌ ನಮಗೆ ಹೆದರಿಕೊಳ್ಳಬೇಕು ಎಂದು ಹೇಳಿಲ್ಲ. ಅವರ ಮೇಲೆ ಪ್ರೀತಿ–ವಿಶ್ವಾಸ ಅಥವಾ ಸಂಬಂಧವಾಗಲಿ ನಮಗಿಲ್ಲ’.

– ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದು ಹೀಗೆ.

‘ಪ್ರಕರಣವನ್ನು ಹತ್ತು ತಿಂಗಳ ಹಿಂದೆಯೇ ಸಿಬಿಐಗೆ ವಹಿಸಲಾಗಿದೆ. ಅಲ್ಲಿಂದ ಆ ಸಂಸ್ಥೆಯವರು ಮಾಹಿತಿ ಕಲೆ ಹಾಕಿದ್ದಾರೆ. ಈಗ ದಾಳಿ ನಡೆಸಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಗೆ ಕುಳಿತಿದ್ದಕ್ಕೆ ಕೊಂಬೆ ಮುರಿಯಿತು ಎನ್ನಲಾಗುವುದಿಲ್ಲ. ಕಾಂಗ್ರೆಸ್‌ನವರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರಷ್ಟೆ’ ಎಂದರು.

‘ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಬಿಜೆಪಿ ಸೇರಲು ಯತ್ನಿಸುತ್ತಿರುವುದು ನನಗೆ ಗೊತ್ತಿಲ್ಲ. ಈ ವಿಚಾರ ನನ್ನೊಂದಿಗಾಗಲಿ, ಕೇಂದ್ರ ಸಚಿವರ ಜೊತೆಗಾಗಲಿ ಚರ್ಚಿಸಿಲ್ಲ. ಸದ್ಯಕ್ಕೆ ಅಲ್ಲಿ (ಧಾರವಾಡದಲ್ಲಿ) ಸೀಟು ಖಾಲಿಯೂ ಇಲ್ಲ. ಅಲ್ಲಿ ಬಂದು ಏನು ಮಾಡುತ್ತಾರೆ? ಎಂದು ಅಚ್ಚರಿಯಿಂದ ಕೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು