ಬೈಲಹೊಂಗಲ (ಬೆಳಗಾವಿ): ಪಟ್ಟಣದ ಮೌನೇಶ್ವರ ನಗರ ನಿವಾಸಿ, ಮಕ್ಕಳ ಸಾಹಿತಿ ಎಂ.ಆರ್. ಮುಲ್ಲಾ (84) ಬುಧವಾರ ನಿಧನರಾದರು.

ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. 14 ಕೃತಿಗಳನ್ನು ರಚಿಸಿದ್ದಾರೆ. ಅನೇಕ ಸಂಘ–ಸಂಸ್ಥೆಗಳನ್ನು ಪ್ರತಿನಿಧಿಸಿ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದರು.

ರಾಜ್ಯ ಸರ್ಕಾರದಿಂದ ‘ಉತ್ತಮ ಶಿಕ್ಷಕ’ ಪ್ರಶಸ್ತಿ, ಕೇಂದ್ರದಿಂದ ‘ಆದರ್ಶ ಶಿಕ್ಷಕ’ ಪ್ರಶಸ್ತಿ ಪಡೆದಿದ್ದರು. ‘ಪ್ರಿಯದರ್ಶಿನಿ’ ಕಾವ್ಯನಾಮದಿಂದ ಕವಿತೆಗಳನ್ನು ರಚಿಸುತ್ತಿದ್ದರು. ‘ಬಯಲು ಬೆಳಗು’– ಮಕ್ಕಳ ನೀತಿವಚನಗಳು, ‘ಆರಾಧಾನ’ ಪ್ರಬಂಧ ಸಂಕಲನ, ಸ್ವಾತಂತ್ರ್ಯಯೋಧ ಬಸಪ್ಪ ಸಿದ್ನಾಳ ಜೀವನಚರಿತ್ರೆ, ನಾಟಕ, ಕಥೆ, ಮಕ್ಕಳ ಕವಿತೆ, ವೈಚಾರಿಕ ಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಬಸವದಳ ಹಾಗೂ ಜಾಮಿಯಾ ಮಸೀದಿ ಖಮರುಲ್ ಇಸ್ಲಾಂ ಸಮಿತಿ ಸದಸ್ಯರಾಗಿದ್ದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ (ತಾಲ್ಲೂಕು) ಹಾಗೂ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದರು.

ಈ ಭಾಗದ ಸರ್ವ ಧರ್ಮಗಳ ಮಠಾಧೀಶರು, ಗುರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 6 ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ನೂರು ಗೌರವ–ಸನ್ಮಾನಕ್ಕೆ ಭಾಜನವಾಗಿದ್ದರು. ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.