ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

Last Updated 1 ಸೆಪ್ಟೆಂಬರ್ 2020, 15:03 IST
ಅಕ್ಷರ ಗಾತ್ರ

ಹುಕ್ಕೇರಿ: ‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು. ನಾನು ಬಡುವಿ ಅದಿನಿ ಅಂತ. ವಾಸ್ತು ಅವ್ರ ಮಾಡ್ಯಾರು. ನಾನು ಆರಾಮ ಅದನ್ರಿ. ನನಗ ಎಲ್ಲ ವ್ಯವಸ್ಥ ಮಾಡ್ಯಾರು. ದೇವರು ಅವರನ್ನು ತಂಪಾಗಿ ಇಟ್ಟಿರಲಿ’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ.

ಇದು ಮಂಗಳವಾರ ಯುವ ಬ್ರಿಗೇಡ್ ವತಿಯಿಂದ ಹೊಸ ಮನೆ ‘ನಮ್ಮನೆ’ ಕಟ್ಟಿಸಿ ಮೀರಮ್ಮ ಬಾಗವಾನ್ ಅವರಿಗೆ ಹಸ್ತಾಂತರ ಮಾಡಿದಾಗ ಅವರು ಆಡಿದ ಮಾತುಗಳಿವು. ಹೋದ ವರ್ಷದ ಪ್ರವಾಹದಲ್ಲಿ ಮನೆ ಶಿಥಿಲಾವಸ್ಥೆಯಿಂದ ಬಿದ್ದು ಹೋದ ನಂತರ ಮುಂದೇನು ಎಂದು ದಿಕ್ಕು ತೋಚದೆ ಇದ್ದಾಗ ಸೂಲಿಬೆಲೆ ಚಕ್ರವರ್ತಿ ಅವರು ನಮ್ಮ ಸ್ಥಿತಿ ನೋಡಿ ಈ ಕಾರ್ಯ ಮಾಡಿದ್ದಾರೆ ಎಂದರು.

ಹೋದ ವರ್ಷ ಪ್ರವಾಹ ಸಂದರ್ಭದಲ್ಲಿ ಇಲ್ಲಿ ಬಂದಿದ್ದೆ. ಕಾಯಿಪಲ್ಲೆ ಮಾರಿಕೊಂಡು ಜೀವಿಸುತ್ತಿದ್ದ ಅಜ್ಜಿಯ ಶಿಥಿಲಾವಸ್ಥೆಯ ಮನೆ ನೋಡಿ ಅಂದೇ ಸಂಕಲ್ಪ ಮಾಡಿದ್ಧೇವು. ಆ ಸಂಕಲ್ಪ ಇಂದು ಕೂಡಿ ಬಂದಿದೆ. ಇದು 7ನೇ ‘ನಮ್ಮನೆ’. ’ಮಹಾ ಪ್ರವಾಹ, ಯುವ ಸಹಾಯ’ ಎಂದ ಧ್ಯೇಯದೊಂದಿಗೆ ನಮ್ಮಯುವ ಬ್ರಿಗೇಡ್‌ ಮೂಲಕ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ಧೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT