ಶನಿವಾರ, ಸೆಪ್ಟೆಂಬರ್ 21, 2019
24 °C

20 ವಾರ್ಡ್‌ಗೆ ನೂರು ಜನ ಆಕಾಂಕ್ಷಿ: ಬಿ.ವಿ. ಶಿವಯೋಗಿ

Published:
Updated:
Prajavani

ಹೊಸಪೇಟೆ: ‘ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯ 20 ವಾರ್ಡ್‌ಗಳ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು 100 ಜನ ಆಕಾಂಕ್ಷಿಗಳು ಒಲವು ತೋರಿಸಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ ಹೇಳಿದರು.

ಇಲ್ಲಿನ ಪಟೇಲ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಟ್ಟಣ ಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘100 ಜನ ಇದ್ದರೂ ಟಿಕೆಟ್‌ ಕೊಡುವುದು 20 ಜನರಿಗೆ ಮಾತ್ರ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರು, ಹಿರಿತನ, ಗೆಲ್ಲುವ ಸಾಮರ್ಥ್ಯ, ಜಾತಿ ಸಮೀಕರಣ ಸೇರಿದಂತೆ ಇತರೆ ವಿಚಾರಗಳನ್ನು ಗಣನೆಗೆ ಟಿಕೆಟ್‌ ಹಂಚಿಕೆ ಮಾಡಲಾಗುವುದು. ಯಾರಿಗೆ ಟಿಕೆಟ್‌ ಸಿಕ್ಕರೂ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಬೇಕು. ಟಿಕೆಟ್‌ ತಪ್ಪಿದರೆ ಬೇಸರ ಪಡಬೇಕಿಲ್ಲ’ ಎಂದು ತಿಳಿಸಿದರು.

‘ವಿಧಾನಸಭೆ ಚುನಾವಣೆ, ಲೋಕಸಭೆ ಉಪಚುನಾವಣೆಯಲ್ಲಿ ಪಕ್ಷ ಗೆದ್ದಿದೆ. ಸಾರ್ವತ್ರಿಕ ಚುನಾವಣೆ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲೂ ಪಕ್ಷ ಜಯಿಸಿ ಅಧಿಕಾರದ ಗದ್ದುಗೆ ಹಿಡಿಯಲಿದೆ. ಗೆಲುವಿಗೆ ರಣತಂತ್ರ ರೂಪಿಸಲಾಗುವುದು. ಕಾರ್ಯಕರ್ತರು ಅದಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕು’ ಎಂದು ಸೂಚಿಸಿದರು. 

ಮಾಜಿ ಶಾಸಕ ರತನ್ ಸಿಂಗ್, ‘ಕಮಲಾಪುರ ಪಟ್ಟಣ ಪಂಚಾಯಿತಿ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಈ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿ ಪುನಃ ಅಧಿಕಾರಕ್ಕೆ ಬರಲಿದೆ. ಮೈತ್ರಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಮಾಜಿ ಶಾಸಕಿ ಗುಜ್ಜಲ್ ಜಯಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷರಾದ ಟಿಂಕರ್‌ ರಫೀಕ್. ಅಮಾಜಿ ಹೇಮಣ್ಣ, ಮುಖಂಡರಾದ ದಾದಾ ಪೀರ್‌, ವೆಂಕಟರಮಣ, ಬಡಾವಲಿ, ಗೌಸ್, ರಾಮಾಂಜನಿ, ರೌಫ್, ಮಲ್ಲಪ್ಪ, ಸಂದೀಪ್ ಸಿಂಗ್, ನಿಂಬಗಲ್‌ ರಾಮಕೃಷ್ಣ, ಮಧುರ ಚೆನ್ನಶಾಸ್ತ್ರಿ ಇದ್ದರು.

Post Comments (+)