ಅಖಂಡ ಬಳ್ಳಾರಿ ಹೋರಾಟ ಸಮಿತಿ ಮುಖಂಡರ ಅಹವಾಲು ಆಲಿಸಿದ ಸಚಿವ ಆನಂದ್ ಸಿಂಗ್

ಬಳ್ಳಾರಿ: ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಅನಿರ್ದಿಷ್ಟ ಅವಧಿಯ ಮುಷ್ಕರ ನಡೆಸಿರುವ ಅಖಂಡ ಬಳ್ಳಾರಿ ಹೋರಾಟ ಸಮಿತಿಯ ಮುಖಂಡರನ್ನು ಮುಷ್ಕರದ ವೇದಿಕೆ ಬಳಿಯೇ ಭೇಟಿ ಮಾಡಿದ ಉಸ್ತುವಾರಿ ಸಚಿವ ಆನಂದ್ ಸಿಂಗ್, ಅಹವಾಲುಗಳನ್ನು ಆಲಿಸಿದರು.
'ರಾಜಕೀಯ ಕಾರಣಗಳಿಗಾಗಿ ಜಿಲ್ಲೆಯನ್ನು ವಿಭಜಿಸಿಲ್ಲ. ಸಣ್ಣ ಜಿಲ್ಲೆಗಳಲ್ಲಿ ಅಭಿವೃದ್ಧಿ ಹೆಚ್ಚು ವೇಗ ಪಡೆಯುತ್ತದೆ. ಆದರೂ ಎಲ್ಲರೂ ಆಕ್ಷೇಪಣೆಗಳನ್ನು ಸಲ್ಲಿಸಿ' ಎಂದು ಸಲಹೆ ನೀಡಿದರು.
ಆಗ್ರಹ; 'ಬಳ್ಳಾರಿ ಆಂಧ್ರ ಗಡಿಪ್ರದೇಶದಲ್ಲಿದ್ದು, ಮುಂದೊಂದು ದಿನ ಬೆಳಗಾವಿಯಲ್ಲಾದಂತೆ ಭಾಷಾ ಸೌಹಾರ್ದತೆ ಕದಡಲು ಅವಕಾಶ ಕೊಡಬಾರದು. ಜಿಲ್ಲೆಯನ್ನು ಒಡೆಯದೆ ಅಖಂಡ ಬಳ್ಳಾರಿಗೆ ವಿಜಯನಗರ ಜಿಲ್ಲೆ ಎಂದು ಹೆಸರಿಡಿ' ಎಂದು ಹೋರಾಟಗಾರರು ಆಗ್ರಹಿಸಿದರು.
'ನಿಮ್ಮಿಂದ ಮಾತ್ರ ಜಿಲ್ಲೆಯ ವಿಭಜನೆಯನ್ನು ತಪ್ಪಿಸಲು ಸಾಧ್ಯ' ಎಂದು ಪ್ರತಿಪಾದಿಸಿದರು.
ಅವರಿಗೆ ಪ್ರತಿಕ್ರಿಯಿಸಿದ ಸಚಿವರು, ' ಪಶ್ಚಿಮ ತಾಲೂಕುಗಳ ಅಹವಾಲನ್ನೂ ಆಲಿಸಬೇಕು. ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಗೆ ಬರಲು ಆ ಭಾಗದ ಜನರಿಗೆ ಹೆಚ್ಚು ಕಷ್ಟವಾಗುತ್ತಿದೆ. ಹೊಸ ಜಿಲ್ಲೆಯಿಂದ ಈ ಕಷ್ಟ ತಪ್ಪುತ್ತದೆ' ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.