ಗುರುವಾರ , ಅಕ್ಟೋಬರ್ 21, 2021
21 °C

ನೋಡೋಣ ಬಾರಾ: ಅಂಕಸಮುದ್ರದಲ್ಲಿ ಬಣ್ಣದ ಕೊಕ್ಕರೆಗಳ ಕಲರವ

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಕಲ್ಯಾಣ ಕರ್ನಾಟಕದಲ್ಲಿರುವ ಏಕೈಕ ಸಂರಕ್ಷಿತ ಪಕ್ಷಿಧಾಮ ತಾಲ್ಲೂಕಿನ ಅಂಕಸಮುದ್ರ ಗ್ರಾಮದಲ್ಲಿದೆ. ಇದು 140ಕ್ಕೂ ಹೆಚ್ಚು ಪಕ್ಷಿಗಳ ನೆಲೆಬೀಡು ಎನ್ನುವುದು ವಿಶೇಷ.

ಸತತ ಹೋರಾಟದ ಫಲವಾಗಿ ಪಕ್ಷಿಧಾಮವನ್ನು ಸರ್ಕಾರ ಘೋಷಿಸಿ ಅದರ ಸಂರಕ್ಷಣೆಗೆ ಮುಂದಾಗಿದೆ. ಭೂ ಕಬಳಿಕೆದಾರರಿಂದ ರಕ್ಷಿಸಲು ಇಡೀ ಪರಿಸರಕ್ಕೆ ತಂತಿಬೇಲಿ ಹಾಕಲಾಗಿದೆ. ವಿವಿಧೆಡೆಗಳಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಪಕ್ಷಿಗಳ ವೀಕ್ಷಣೆಗೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಪಕ್ಷಿಗಳನ್ನು ನೋಡಲು ಬೈನಾಕುಲರ್‌ ಒದಗಿಸುತ್ತಾರೆ. ವಿಶ್ರಾಂತಿ ಭವನವೂ ನಿರ್ಮಿಸಲಾಗಿದೆ.

ಅಂಕಸಮುದ್ರ ಕೆರೆಯ 244 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಹರಡಿದೆ. ದೇಶ–ವಿದೇಶಗಳ 140ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ಇಲ್ಲಿವೆ. ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಬೂದು ಬಕ (ಗ್ರೇ ಹೆರಾನ್), ಇರಳು ಬಕ ( ನೈಟ್ ಹೆರಾನ್), ನೀರುಕಾಗೆ (ಕಾರ್ಮೋರೆಂಟ್), ಗೋವಕ್ಕಿ (ಕ್ಯಾಟಲ್ ಈಗ್ರೇಟ್), ಹೆಜ್ಜಾರ್ಲೆ (ಪೆಲಿಕಾನ್ಸ್), ಕಬ್ಬಕ್ಕಿ, ಕೊಕ್ಕರೆ, ವಿವಿಧ ಜಾತಿಯ ಬಾತುಕೋಳಿಗಳು ಪ್ರಮುಖವಾದವು.

ತಾಲ್ಲೂಕಿನ ತಂಬ್ರಹಳ್ಳಿಯ ಬಂಡೆ ರಂಗನಾಥ ಸ್ವಾಮಿ ದೇವಸ್ಥಾನ ಪ್ರಕೃತಿಯ ಮಧ್ಯೆ ಇದೆ. ಈ ದೇವಸ್ಥಾನ ಎತ್ತರದ ಪ್ರದೇಶದಲ್ಲಿದ್ದು, ಇಲ್ಲಿಂದ ಇಡೀ ತುಂಗಭದ್ರಾ ಹಿನ್ನೀರಿನ ಪ್ರದೇಶ ನೋಡುತ್ತಿದ್ದರೆ ಒಂದು ಕ್ಷಣ ಮೈಮರೆತು ಹೋಗುತ್ತೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು