ಆರ್ಯ ಈಡಿಗ ಸಮಾಜದಿಂದ ಪ್ರತಿಭಟನೆ

7
ಅಧಿಕಾರಿ ಕಿರುಕುಳಕ್ಕೆ ಸಿಬ್ಬಂದಿ ಆತ್ಮಹತ್ಯೆ ಯತ್ನ

ಆರ್ಯ ಈಡಿಗ ಸಮಾಜದಿಂದ ಪ್ರತಿಭಟನೆ

Published:
Updated:
Deccan Herald

ಹೊಸಪೇಟೆ: ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ನಗರದ ಕೇಂದ್ರ ಬಸ್‌ ನಿಲ್ದಾಣದ ಸಿಬ್ಬಂದಿ ಸದಾಶಿವ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು, ಅದಕ್ಕೆ ಕಾರಣರಾದ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಆರ್ಯ ಈಡಿಗ ಸಮಾಜದವರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕೇಂದ್ರ ಬಸ್‌ ನಿಲ್ದಾಣದ ಎದುರು ಸೇರಿದ ಸಮಾಜದವರು ಈಶಾನ್ಯ ಸಾರಿಗೆ ಸಂಸ್ಥೆ ಹೊಸಪೇಟೆ ಉಪವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮೊಹಮ್ಮದ್‌ ಫೈಜ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಮೊಹಮ್ಮದ್‌ ಫೈಜ್‌ ನೀಡಿರುವ ಕಿರುಕುಳದಿಂದ ಸದಾಶಿವ ಆತ್ಮಹತ್ಯೆಗೆ ಯತ್ನಿಸಿ, ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ. ಹೀಯಾಳಿಕೆಯ ಮಾತುಗಳನ್ನಾಡಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಸದಾಶಿವ ಅವರು ಈಡಿಗ ಸಮಾಜಕ್ಕೆ ಸೇರಿದ್ದು, ಸಮಾಜ ಅವರ ಬೆಂಬಲಕ್ಕೆ ಇದೆ’ ಎಂದು ತಿಳಿಸಿದರು.

ಸಮಾಜದ ತಾಲ್ಲೂಕು ಅಧ್ಯಕ್ಷ ಈ. ಕುಮಾರಸ್ವಾಮಿ, ಮುಖಂಡರಾದ ಕೆ. ರಾಘವೇಂದ್ರ, ವೆಂಕಟರಮಣ, ಪ್ರಸಾದ್‌, ರಂಗನಗೌಡ, ಅಶೋಕ್‌ ಪೂಜಾರಿ, ಶ್ರೀಕಾಂತ್‌, ರವಿಕುಮಾರ್‌, ನಾರಾಯಣ ಸ್ವಾಮಿ, ವೀರಭದ್ರ, ಗೋಪಾಲಪ್ಪ, ಗೋವಿಂದರಾಜು, ಅವಿನಾಶ್‌, ಐ. ವಾಸುದೇವ, ಸುಬ್ಬಣ್ಣ, ಲಕ್ಷ್ಮಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !