ಶನಿವಾರ, ಡಿಸೆಂಬರ್ 7, 2019
24 °C

ಮೆಕ್ಕೆಜೋಳಕ್ಕೆ ಹಾನಿಮಾಡಿದ ಕರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕಿನ ಕಾಕುಬಾಳು ಗ್ರಾಮದ ರೈತರ ಹೊಲಗಳಿಗೆ ಮಂಗಳವಾರ ರಾತ್ರಿ ಕರಡಿಗಳು ನುಗ್ಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ ತಿಂದು, ಹಾಳು ಮಾಡಿವೆ.

ಗ್ರಾಮದ ಹಿರೇಗುಡ್ಡ ಬಳಿಯ ಸರ್ವೇ ನಂ. 162ರಲ್ಲಿ ಹುಡೇದಮೂರ್ತಿ ಹಾಗೂ ದೊಡ್ಡನಗೌಡ ಎಂಬುವರ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ. 

‘ಪ್ರತಿವರ್ಷ ಜೋಳ, ಮುಸುಕಿನ ಜೋಳ, ಮೆಕ್ಕೆಜೋಳ ಗದ್ದೆಗಳಿಗೆ ನುಗ್ಗಿ ಹಿಂಗಾರು ಬೆಳೆಗಳನ್ನು ಕರಡಿಗಳು ಹಾಳು ಮಾಡುತ್ತಿವೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕರಡಿಗಳು ದಾಳಿ ನಡೆಸಿ, ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ಹಾಳು ಮಾಡಿವೆ’ ಎಂದು ಮೂರ್ತಿ ತಿಳಿಸಿದರು.

ಪ್ರತಿಕ್ರಿಯಿಸಿ (+)