ಹೊಸಪೇಟೆ: ಬಿಜೆಪಿ ಅಭ್ಯರ್ಥಿ ಬಿರುಸಿನ ಪ್ರಚಾರ

ಬುಧವಾರ, ಏಪ್ರಿಲ್ 24, 2019
31 °C

ಹೊಸಪೇಟೆ: ಬಿಜೆಪಿ ಅಭ್ಯರ್ಥಿ ಬಿರುಸಿನ ಪ್ರಚಾರ

Published:
Updated:
Prajavani

ಹೊಸಪೇಟೆ: ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರು ಭಾನುವಾರ ನಗರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು.

ಬಿಸಿಲೇರುವುದಕ್ಕೂ ಮುನ್ನವೇ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.) ಪ್ರಾಂಗಣದಲ್ಲಿರುವ ತರಕಾರಿ ಮಾರುಕಟ್ಟೆಗೆ ಹೋಗಿ ಮತ ಯಾಚಿಸಿದರು. ತರಕಾರಿ ವ್ಯಾಪಾರಿಗಳು, ಗ್ರಾಹಕರಿಗೆ ಕರಪತ್ರ ನೀಡಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಇದಾದ ಬಳಿಕ ನಗರದ ಮುನ್ಸಿಪಲ್‌ ಮೈದಾನಕ್ಕೆ ತೆರಳಿದ ಅವರು, ಅಲ್ಲಿ ವಾಯು ವಿಹಾರಕ್ಕೆ ಬಂದವರು, ಆಟವಾಡುತ್ತಿದ್ದವರನ್ನು ಕಂಡು ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು. ಇದೇ ವೇಳೆ ಕೆಲಹೊತ್ತು ಯುವಕರೊಂದಿಗೆ ಕ್ರಿಕೆಟ್‌ ಆಡಿ ಗಮನ ಸೆಳೆದರು. 

ಮುಖಂಡರಾದ ಅನಂತ ಪದ್ಮನಾಭ, ಕಟಿಗಿ ರಾಮಕೃಷ್ಣ, ಗುದ್ಲಿ ಪರಶುರಾಮ, ಚಂದ್ರಕಾಂತ್ ಕಾಮತ್,  ಬಸವರಾಜ ನಾಲತ್ವಾಡ, ಗುಂಡಿ ರಾಘವೇಂದ್ರ, ಹನುವಾಳ್ ದೇವರಾಜ್, ಮಧುಸೂದನ, ಸಂತೋಷ, ಶಂಕರ್‌ ಮೇಟಿ ಇದ್ದರು.

ಶನಿವಾರ ತಾಲ್ಲೂಕಿನ ಕಾಕುಬಾಳು ಸಮೀಪದ ಜೋಗಕ್ಕೆ ಹೋಗಿ ರಾಜ ಭಾರತಿ ಸ್ವಾಮೀಜಿ ಅವರ ದರ್ಶನ ಪಡೆದರು.

ಬಿಜೆಪಿ ಕಚೇರಿ ಉದ್ಘಾಟನೆ:

ಇಲ್ಲಿನ ಸ್ಟೇಷನ್‌ ರಸ್ತೆಯಲ್ಲಿ ಶನಿವಾರ ಬಿಜೆಪಿ ಕಚೇರಿಯನ್ನು ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಉದ್ಘಾಟಿಸಿದರು. ಬಿಜೆಪಿ ಕಾರ್ಯಕರ್ತರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !