ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ. ಮಾತು ಕೊಟ್ಟರೆ ಈಡೇರಿಸುತ್ತಾರೆ: ಅರಣ್ಯ ಸಚಿವ ಆನಂದ್‌ ಸಿಂಗ್‌

Last Updated 11 ಜನವರಿ 2021, 7:58 IST
ಅಕ್ಷರ ಗಾತ್ರ

ಹೊಸಪೇಟೆ: ‘ಬೇರೆ ಪಕ್ಷ ಬಿಟ್ಟು ಬಿಜೆಪಿಗೆ ಬಂದ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ. ಇನ್ನೂ ಕೆಲವರಿಗೆ ಕೊಡಬಹುದು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಸಿ.ಎಂ. ಮಾತು ಕೊಟ್ಟರೆ ಈಡೇರಿಸುತ್ತಾರೆ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಭರವಸೆ ವ್ಯಕ್ತಪಡಿಸಿದರು.

‘ಸಂಪುಟ ಪುನರ್‌ರಚನೆ ಆಗುತ್ತೋ ಅಥವಾ ವಿಸ್ತರಣೆಯಾಗುತ್ತೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಸಿ.ಎಂ. ಮಾತು ಕೊಟ್ಟರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಎಂದರೆ ವಿಜಯನಗರ ಜಿಲ್ಲೆ ರಚನೆ ಘೋಷಣೆ. ವಿಜಯನಗರ ಕ್ಷೇತ್ರದ ಉಪಚುನಾವಣೆಗೂ ಜಿಲ್ಲೆ ರಚನೆ ಸಂಬಂಧ ಭರವಸೆ ಕೊಟ್ಟಿದ್ದರು. ಅದನ್ನು ಈಗ ಈಡೇರಿಸಿದ್ದಾರೆ’ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಟ್ರ್ಯಾಪ್‌ ಕ್ಯಾಮೆರಾ ಅಳವಡಿಕೆ

‘ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವುಗಳ ದಾಳಿಯೂ ಹೆಚ್ಚಾಗಿದೆ. ‘ಮ್ಯಾನ್‌ ಈಟರ್ಸ್‌’ ಚಿರತೆ ಗುರುತಿಸುವುದು ಕಷ್ಟ. ಆದರೆ, ಒಂದು ಸಲ ಮನುಷ್ಯನ ಮೇಲೆ ದಾಳಿ ನಡೆಸಿದ ಚಿರತೆ ಮತ್ತೆ ಆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ. ದಾಳಿ ನಡೆಸಿದ ಸ್ಥಳದಲ್ಲಿ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಬೇಕು. ಅಗತ್ಯ ಬಿದ್ದರೆ ನರಹಂತಕ ಚಿರತೆ ಕಂಡ ಕೂಡಲೇ ಗುಂಡು ಹಾರಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ಕೊಡಲಾಗಿದೆ’ ಎಂದು ಸಚಿವರು ಹೇಳಿದರು.

‘ಎಲ್ಲೆಲ್ಲಿ ಚಿರತೆಗಳ ಓಡಾಟ ಹೆಚ್ಚಿದೆಯೋ ಅಂಥ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಅಂಜನಾದ್ರಿ, ಹಂಪಿ ಸುತ್ತಮುತ್ತ ಹೆಚ್ಚಾಗಿ ಬೆಟ್ಟ, ಗುಡ್ಡಗಳಿರುವುದರಿಂದ ಚಿರತೆಗಳು ಸುಲಭವಾಗಿ ಅವಿತುಕೊಳ್ಳುತ್ತವೆ. ಅವುಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ತಜ್ಞರೊಂದಿಗೆ ಸಮಾಲೋಚಿಸಿ ಅವುಗಳ ದಾಳಿ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ರಾಮನಗರದಲ್ಲಿ ರಣಹದ್ದು ತಳಿ ಸಂವರ್ಧನೆ ಕೇಂದ್ರದ ಕೆಲಸ ನಡೆಯುತ್ತಿದೆ. ಆದರೆ, ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕಾಗಿ ಅಂದುಕೊಂಡ ವೇಗದಲ್ಲಿ ಕೆಲಸಗಳು ಆಗಿಲ್ಲ. ಇನ್ಮುಂದೆ ಚುರುಕು ಪಡೆದುಕೊಳ್ಳಲಿದೆ’ ಎಂದು ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT