ಬುಧವಾರ, ಏಪ್ರಿಲ್ 14, 2021
25 °C

ವಿಮ್ಸ್ ಮೈದಾನದಲ್ಲಿ ಕ್ರಿಕೆಟ್ ಕ್ರೀಡಾಂಗಣ ಅಭಿವೃದ್ಧಿ ಸಲ್ಲದು: ವಕೀಲ ನಾಗಭೂಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: 'ವಿಮ್ಸ್ ಮೈದಾನದಲ್ಲಿ ಕ್ರಿಕೆಟ್ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಅರಿಸ್ಟೋಕ್ರಾಟ್ ಸಂಸ್ಥೆಗೆ ವಹಿಸಬಾರದು. ಮೈದಾನವನ್ನು ಈಗ ಇರುವ ಸ್ಥಿತಿಯಲ್ಲೇ ಉಳಿಸಬೇಕು' ಎಂದು ವಕೀಲ ನಾಗಭೂಷಣ ಅವರು ಆಗ್ರಹಿಸಿದರು.

'ವಿಮ್ಸ್ ಮೈದಾನದಲ್ಲಿ ಈಗ ನಡೆಯುತ್ತಿರುವಂತೆ ಎಲ್ಲ‌ ಕ್ರೀಡಾ ತರಬೇತಿ, ನಾಗರಿಕರ ವ್ಯಾಯಾಮ ಮತ್ತು‌ ವಾಕಿಂಗ್‌ ಚಟುವಟಿಕೆಗಳು ಆತಂಕವಿಲ್ಲದೆ ಮುಂದುವರಿಯಲು ಅನುವು ಮಾಡಬೇಕು' ಎಂದು‌ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

'ವಿಮ್ಸ್ ಮೈದಾನವನ್ನು ಖಾಸಗಿಯವರಿಗೆ ವಹಿಸುವ ಬದಲು ನಗರದ ಕೋಟೆ ಪ್ರದೇಶದಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕಾಗಿಯೇ ಮೀಸಲಿರುವ ಯುವ‌ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 5 ಎಕೆರಯನ್ನು ಅಭಿವೃದ್ಧಿಪಡಿಸಲಿ' ಎಂದು ಆಗ್ರಹಿಸಿದರು.

ಕರ್ನಾಟಕ ಜನಸೈನ್ಯ ಸಂಘಟನೆಯ ಕೆ.ಎರ್ರಿಸ್ವಾಮಿ, ಸಾರಿಗೆ ಸಂಸ್ಥೆ ಕಾರ್ಮಿಕ ಮುಖಂಡ ಆದಿಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.