ಡ್ಯಾಂ ಪ್ರವೇಶ ಶುಲ್ಕ ರದ್ದುಗೊಳಿಸಿ

7
ಯುವಜನ ಫೆಡರೇಶನ್‌ ಕಾರ್ಯಕರ್ತರ ಪ್ರತಿಭಟನೆ, ಆಗ್ರಹ

ಡ್ಯಾಂ ಪ್ರವೇಶ ಶುಲ್ಕ ರದ್ದುಗೊಳಿಸಿ

Published:
Updated:
Deccan Herald

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯ ಮುಂಭಾಗದ ಉದ್ಯಾನವನದ ಪ್ರವೇಶ ಶುಲ್ಕವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿ.ವೈ.ಎಫ್‌.ಐ.) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಲಾಶಯದ ಪ್ರವೇಶ ದ್ವಾರದ ಬಳಿ ಸೇರಿದ ಕಾರ್ಯಕರ್ತರು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ಮಂಡಳಿ ಕಾರ್ಯದರ್ಶಿ ವೆಂಕಟರಮಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಉದ್ಯಾನದ ಪ್ರವೇಶಕ್ಕೆ ಒಬ್ಬರಿಂದ ತಲಾ ₹10, ವಾಹನದಲ್ಲಿ ವೈಕುಂಠ ಬೆಟ್ಟಕ್ಕೆ ಕರೆದೊಯ್ಯಲು ಹಾಗೂ ವಾಹನ ನಿಲುಗಡೆಗೆ ತಲಾ ₹20 ನಿಗದಿಪಡಿಸಲಾಗಿದೆ. ಹೊರಗಿನಿಂದ ಪ್ರವಾಸಿಗರು ಬಂದರೆ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ಕೀಳುತ್ತಿದ್ದಾರೆ. ಹೀಗೆ ಎಲ್ಲಕ್ಕೂ ಶುಲ್ಕ ವಿಧಿಸಿರುವುದರಿಂದ ಜನಸಾಮಾನ್ಯರು ಜಲಾಶಯ ನೋಡಲು ಸಾಧ್ಯವಾಗುತ್ತಿಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಪ್ರತಿಯೊಂದಕ್ಕೂ ಶುಲ್ಕ ಪಡೆಯುವ ಮಂಡಳಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು, ಕ್ಯಾಂಟೀನ್‌ ಹಾಗೂ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಕೂಡಲೇ ಮೂಲಸೌಕರ್ಯ ಕಲ್ಪಿಸಬೇಕು. ಎಲ್ಲ ರೀತಿಯ ಶುಲ್ಕ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ  ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ವಿ. ಸ್ವಾಮಿ, ಉಪಾಧ್ಯಕ್ಷ ಜೆ. ಶಿವಕುಮಾರ, ಕಾರ್ಯದರ್ಶಿ ಕಲ್ಯಾಣಯ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಕೆ. ರಮೇಶ, ಖಜಾಂಚಿ ಈಡಿಗರ ಮಂಜುನಾಥ, ಜಿಲ್ಲಾ ಸಮಿತಿ ಸದಸ್ಯ ಬಂಡೆ ತಿರುಕಪ್ಪ, ಪ್ರಮುಖರಾದ ಬಿಸಾಟಿ ಮಹೇಶ, ಎಚ್‌. ರಾಜಚಂದ್ರಶೇಖರ, ಕೆ.ಎಂ. ಸಂತೋಷ, ಎಂ. ಉಮಾ ಮಹೇಶ್ವರ, ಬಿ. ಸೂರ್ಯ ಕಿರಣ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !