ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ತಾಲ್ಲೂಕು ನಿರ್ಮಾಣದ ಗುರಿ

ಕನ್ನಡ ಭವನಕ್ಕೆ ಭೂಮಿಪೂಜೆ: ತುಕಾರಾಂ
Last Updated 4 ಸೆಪ್ಟೆಂಬರ್ 2021, 3:49 IST
ಅಕ್ಷರ ಗಾತ್ರ

ಸಂಡೂರು: ‘ನಾಡು, ನುಡಿ ಸಂಸ್ಕೃತಿ ರಕ್ಷಿಸಿ, ಬೆಳೆಸಲು ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್‍ನ ‘ಕನ್ನಡ ಭವನ’ವನ್ನು ಸಂಡೂರಿನಲ್ಲಿ ಜಿಲ್ಲಾ ಖನಿಜ ನಿಧಿ ಅನುದಾನ ₹ 1.10 ಕೋಟಿ ಹಾಗೂ ಸಿ.ಎಸ್.ಆರ್ ಅನುದಾನ ₹ 15 ಲಕ್ಷ ಸೇರಿ ಒಟ್ಟು ₹ 1.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದೊಂದು ಮಾದರಿ ಭವನವಾಗಲಿ’ ಎಂದು ಶಾಸಕರಾದ ಈ. ತುಕಾರಾಂ ಅವರು ಹೇಳಿದರು.

ಸಂಡೂರಿನ ದೌಲತ್‍ಪುರ ರಸ್ತೆಯಲ್ಲಿ ಶುಕ್ರವಾರ ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಉದ್ದೇಶಿತ ಭವನದ ಪಕ್ಕದಲ್ಲಿಯ ಉದ್ಯಾನ ಸೇರಿ ಪಟ್ಟಣದಲ್ಲಿಯ 5 ಪಾರ್ಕ್ ಗಳನ್ನು ಬೆಂಗಳೂರಿನ ಲಾಲ್‌ಬಾಗ್‍ನ ಅಧಿಕಾರಿಗಳ ಉಸ್ತುವಾರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಮಾದರಿ ತಾಲ್ಲೂಕಾಗಿಸುವ ಗುರಿಯನ್ನು ಹೊಂದಲಾಗಿದೆ. ತಾಲ್ಲೂಕಿನಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣ ದೊರೆಯುವಂತಾಗಲು ಕ್ರಮಕೈಗೊಳ್ಳಲಾಗಿದೆ. ಹೊಸದಾಗಿ ಎಂ.ಬಿ.ಎ ಹಾಗೂ ಮೈನಿಂಗ್ ಕಾಲೇಜು ಆರಂಭಿಸಲು ಯೋಜನೆ ರೂಪಿಸಲಾಗಿದೆ. ತಾಲ್ಲೂಕಿನಲ್ಲಿ ಐ.ಎ.ಎಸ್ ಹಾಗೂ ಐಪಿಎಸ್ ಕೋಚಿಂಗ್ ದೊರೆಯುವಂತೆ ಮಾಡಲು ಪ್ರಯತ್ನ ನಡೆದಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಬಳ್ಳಾರಿ ಜಿಲ್ಲೆ ಸಾಹಿತ್ಯ, ಸಂ ಸ್ಕೃತಿಗೆ ಹೆಸರಾಗಿದೆ. ಸಾಹಿತ್ಯದಿಂದ ಸಂಸ್ಕೃತಿ ಬೆಳೆಯುತ್ತದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆ ಹಾಗೂ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ, ಬಿ.ಆರ್. ಮಸೂತಿ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಸದಸ್ಯರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಹುಲುಗಪ್ಪ ಹಾಗೂ ಸದಸ್ಯರು, ನಾಡೋಜ ಡಾ.ವಿ.ಟಿ. ಕಾಳೆ, ಸಿ.ಎಂ. ಶಿಗ್ಗಾವಿ, ಕಸಾಪ ತೋರಣಗಲ್ಲು ಹೋಬಳಿ ಘಟಕದ ಅಧ್ಯಕ್ಷ ಭುವನೇಶ್ ಮೇಟಿ, ಚೋರನೂರು ಹೋಬಳಿ ಘಟಕದ ಅಧ್ಯಕ್ಷ ಎಸ್.ಎಚ್.ಎಂ. ರುದ್ರಯ್ಯಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಮುಖಂಡರಾದ ಸಿ.ಆರ್. ಗೋಪಾಲ್, ಪಾರ್ಥಸಾರಥಿ, ಆಶಾಲತಾ ಸೋಮಪ್ಪ, ಜಿ. ವೀರೇಶ್, ಎಚ್.ಎನ್. ಭೋಸ್ಲೆ, ಕೆ. ತಿಪ್ಪೇರುದ್ರ, ಜೆ.ಎಂ. ಶಿವಪ್ರಸಾದ್, ಎನ್.ಎಂ. ವೀರೇಶಯ್ಯ, ಸತ್ಯಮೂರ್ತಿ ಹೊಳಗುಂದಿ, ಕೊಟ್ರೇಶ್ ಮೈದೂರ್, ಎಂ.ಟಿ. ರಾಥೋಡ್, ಷಣ್ಮುಖರಾವ್, ಗಡಾದ್ ರಮೇಶ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT