ಗುರುವಾರ , ಅಕ್ಟೋಬರ್ 17, 2019
22 °C

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ದಂಪತಿ ಪಾರು

Published:
Updated:
Prajavani

ಬಳ್ಳಾರಿ: ನಗರದ ಪೋಲಾ ಪ್ಯಾರಾಡೈಸ್ ಹೊಟೇಲ್ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ವಿದ್ಯಾನಗರ ನಿವಾಸಿ ನಾಗರಾಜ ಮತ್ತು ಅವರ ಪತ್ನಿ ಪ್ರಾಣಾಪಾಯದಿಂದ ಪಾರಾದವರು. ಕ್ರೈಸ್ತಧರ್ಮದ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ವಾಪಾಸ್ ಮನೆಗೆ ತೆರಳುತ್ತಿದ್ದ ವೇಳೆ ಕೌಲ್‌ಬಜಾರ್ ಎರಡನೇ ರೈಲ್ವೇ ಗೇಟ್ ಬಳಿಯಿರುವ ಹೋಟೇಲ್ ಸಮೀಪ ಅವಘಡ ನಡೆದಿದೆ. ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಆತಂಕಕ್ಕೊಳಗಾದ ದಂಪತಿ ಕಾರಿನಿಂದ ಇಳಿದು ಹೊರಬಂದಿದ್ದಾರೆ. ಈ ವೇಳೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. 

ಕಾರಿನ ಎಂಜಿನ್ ಹೆಚ್ಚು ಬಿಸಿಯಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಪಿಐ ಬಸವರಾಜ ನೇತೃತ್ವದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. 

Post Comments (+)