ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕೋಮು ಪ್ರಚೋದನೆ, ಯುವಕನ ಬಂಧನ

Last Updated 12 ಏಪ್ರಿಲ್ 2020, 16:57 IST
ಅಕ್ಷರ ಗಾತ್ರ

ಹೊಸಪೇಟೆ: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್‌ ಮಾಡಿದ ಯುವಕನನ್ನು ಭಾನುವಾರ ವಶಕ್ಕೆ ಪಡೆದಿರುವ ತಾಲ್ಲೂಕಿನ ಹಂಪಿ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಂಪಿ ನಿವಾಸಿ ಶಿವರಾಜ ನ್ಯಾಯಾಂಗ ಬಂಧನಕ್ಕೆ ಒಳಗಾದ ಯುವಕ. ‘ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಬಡವರಿಗೆ ವಿತರಿಸಲು ಆಹಾರದ ಕಿಟ್‌ಗಳನ್ನು ಸಿದ್ಧಪಡಿಸುತ್ತಿರುವ ಚಿತ್ರಗಳು ಏ.10ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆ ಚಿತ್ರಗಳನ್ನು ಆಯ್ದುಕೊಂಡು, ಅದರ ಅಡಿಯಲ್ಲಿ ‘ಸಿಂಗ್‌ ಅವರು ಮುಸ್ಲಿಮರಿಂದ ಕಿಟ್‌ಗಳನ್ನು ತಯಾರಿಸುತ್ತಿದ್ದಾರೆ. ಅದರಿಂದ ಕೊರೊನಾ ಸೋಂಕು ತಗುಲಬಹುದು. ಹಾಗಾಗಿ ಯಾರೂ ಕಿಟ್‌ಗಳನ್ನು ಪಡೆಯಬಾರದು’ ಎಂದು ಶಿವರಾಜ ಪೋಸ್ಟ್‌ ಮಾಡಿದ್ದರು. ಈ ಕುರಿತು ಬಿಜೆಪಿ ಕಾರ್ಯಕರ್ತ ಬಸವರಾಜ ಎನ್ನುವವರು ಭಾನುವಾರ ದೂರು ಕೊಟ್ಟಿದ್ದರು. ಆ ದೂರಿನ ಮೇರೆಗೆ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT