ಗುರುವಾರ , ಡಿಸೆಂಬರ್ 5, 2019
22 °C

ಬಳ್ಳಾರಿ ಉಸ್ತುವಾರಿ ನನಗೆ ಕಾದಿರಿಸಿಲ್ಲ: ಆನಂದ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ನಾನು ಯಾವುದೇ ರೀತಿಯ ಷರತ್ತು ಹಾಕಿಲ್ಲ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನನಗೆ ಕಾದಿರಿಸಿದ್ದಾರೆ ಎನ್ನುವುದು ತಪ್ಪು ಕಲ್ಪನೆ’ ಎಂದು ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಸ್ಪಷ್ಟ ಪಡಿಸಿದರು.

ಭಾನುವಾರ ಇಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಉಪಚುನಾವಣೆಯಲ್ಲಿ ಟಿಕೆಟ್‌ ಕೊಡಬೇಕು ಎಂದು ಕೇಳಿರಲಿಲ್ಲ. ಈಗಲೂ ಸ್ಪರ್ಧೆಯಿಂದ ಹಿಂದೆ ಸರಿಯಲು ಹೇಳಿದರೆ ಅದನ್ನೂ ಒಪ್ಪಿಕೊಳ್ಳುವೆ. ಪಕ್ಷ ಸಂಘಟನೆಯ ಕೆಲಸ ಮಾಡುವೆ’ ಎಂದು ಹೇಳಿದರು.

‘ಶ್ರೀರಾಮುಲು ಹಾಗೂ ನಾನು ಆತ್ಮೀಯ ಸ್ನೇಹಿತರು. ನನ್ನನ್ನು ರಾಜಕೀಯಕ್ಕೆ ಕರೆತಂದವರೇ ಅವರು. ಅವರೊಂದು ಪಕ್ಷ, ನಾನೊಂದು ಪಕ್ಷದಲ್ಲಿದ್ದಾಗ ಅಂದಿನ ಸನ್ನಿವೇಶಕ್ಕೆ ತಕ್ಕಂತೆ ಮಾತನಾಡಿದ್ದೇವೆಯೆ ಹೊರತು ಯಾವುದೇ ರೀತಿಯ ದುರುದ್ದೇಶದಿಂದಲ್ಲ. ರಾಜಕೀಯದಲ್ಲಿ ನನಗಿಂತ ಹಿರಿಯರಾಗಿರುವ ಅವರಿಗೇ ಬಳ್ಳಾರಿ ಉಸ್ತುವಾರಿ ನೀಡಬೇಕು. ಅಷ್ಟೇ ಅಲ್ಲ, ಅವರನ್ನು ರಾಜ್ಯದ ಉಪಮುಖ್ಯಮಂತ್ರಿ ಮಾಡಬೇಕು’ ಎಂದು ಆಗ್ರಹಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು