ಕುದುರೆ ಮೇಲೆ ಚಿರತೆ ದಾಳಿ

7

ಕುದುರೆ ಮೇಲೆ ಚಿರತೆ ದಾಳಿ

Published:
Updated:
Deccan Herald

ಹೊಸಪೇಟೆ: ತಾಲ್ಲೂಕಿನ ಹಂಪಿ ವಿಜಯ ವಿಠಲ ದೇಗುಲದ ರಾಜರ ತುಲಾಭಾರ ಮಂಟಪದ ಬಳಿ ಬುಧವಾರ ಬೆಳಿಗ್ಗೆ ಚಿರತೆಯೊಂದು ಕುದುರೆ ಮೇಲೆ ದಾಳಿ ನಡೆಸಿದೆ.

ಕುದುರೆಯ ಮುಖ, ಕತ್ತು ಹಾಗೂ ಮುಂಭಾಗದ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಎರಡು ವಾರಗಳಲ್ಲಿ ಮೂರನೇ ಸಲ ಈ ಭಾಗದಲ್ಲಿ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸಿದೆ. ಇದಕ್ಕೂ ಮೊದಲು ಹಳೆ ಶಿವ ದೇವಸ್ಥಾನ, ಅದಾದ ನಂತರ ಕುದುರೆ ಗೊಂಬೆ ಮಂಟಪದ ಬಳಿ ಕುರಿ ಮತ್ತು ಕುದುರೆ ಮೇಲೆ ದಾಳಿ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !