ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಕಲ್ಲಿನಲ್ಲಿದೆ ಗಾಂಧೀಜಿ ವಾಕಿಂಗ್ ಸ್ಟಿಕ್‌

7

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಕಲ್ಲಿನಲ್ಲಿದೆ ಗಾಂಧೀಜಿ ವಾಕಿಂಗ್ ಸ್ಟಿಕ್‌

Published:
Updated:
Deccan Herald

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ವೀರಾಪುರ ಈಶ್ವರಪ್ಪ ಅವರ ಪುತ್ರ ಬಿ.ವಿ.ಮಲ್ಲಿಕಾರ್ಜುನಪ್ಪ ಅವರ ಮನೆಯಲ್ಲಿ ಮಹಾತ್ಮ ಗಾಂಧೀಜಿ ಉಪಯೋಗಿಸುತ್ತಿದ್ದ ವಾಕಿಂಗ್ ಸ್ಟಿಕ್‌ ಹಾಗೂ ಅವರ ಹಸ್ತಾಕ್ಷರವಿರುವ ಪತ್ರವನ್ನು ಜತನದಿಂದ ಇಡಲಾಗಿದೆ.

ಈಶ್ವರಪ್ಪ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ದೇಶದ ಪ್ರತಿ ಅವರಿಗಿದ್ದ ಭಕ್ತಿ ನೋಡಿ ಗಾಂಧೀಜಿ ಅವರು ತಮ್ಮ ವಾಕಿಂಗ್‌ ಸ್ಟಿಕ್‌, ಗಡಿಯಾರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಪತ್ರ ಕೂಡ ಬರೆದಿದ್ದರು. 1934ರ ಮಾ. 3ರಂದು ನೀಡಿದ್ದ ಈ ಎಲ್ಲ ವಸ್ತುಗಳು ಮಲ್ಲಿಕಾರ್ಜುನಪ್ಪ ಅವರು ಬಹಳ ಸುರಕ್ಷಿತವಾಗಿ ಇಟ್ಟುಕೊಂಡಿರುವುದು ವಿಶೇಷ.

‘ಸ್ವಾತಂತ್ರ್ಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ಗಾಂಧೀಜಿಯವರನ್ನು ದಾವಣಗೆರೆಯಿಂದ ಬಳ್ಳಾರಿ ವರೆಗೆ ನಮ್ಮ ತಂದೆಯವರು ಕಾರಿನಲ್ಲಿ ಕರೆದೊಯ್ದಿದ್ದರು. ಸ್ವತಃ ನಮ್ಮ ತಂದೆಯೇ ಕಾರು ಓಡಿಸಿದ್ದರು. ಸಭೆ ಮುಗಿದ ನಂತರ ಬಳ್ಳಾರಿ ರೈಲು ನಿಲ್ದಾಣದಲ್ಲಿ ಗಾಂಧೀಜಿಯವರು, ನಮ್ಮ ತಂದೆಯವರನ್ನು ಕರೆದು ಬೆನ್ನು ತಟ್ಟಿದ್ದರು. ಅದೇ ವೇಳೆ ಸೊಂಟದಲ್ಲಿದ್ದ ಗಡಿಯಾರ ಮತ್ತು ಕೈಯಲ್ಲಿದ್ದ ಹಗುರ ವಾಕಿಂಗ್‌ ಸ್ಟಿಕ್‌ ಅನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದರು. ಜತೆಗೆ ಪತ್ರ ಕೂಡ ಬರೆದು ಕೊಟ್ಟಿದ್ದರು’ ಎಂದು ಮಲ್ಲಿಕಾರ್ಜುನಪ್ಪ ನೆನಪಿಸಿಕೊಳ್ಳುತ್ತಾರೆ.

ಮಲ್ಲಿಕಾರ್ಜುನಪ್ಪನವರು ಗಾಂಧೀಜಿಯವರು ಕೊಟ್ಟಿರುವ ವಸ್ತುಗಳನ್ನು ಆಗಾಗ ನೋಡಿ, ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !