ಬಾಲಮಂದಿರದಿಂದ ಬಾಲಕರು ಪರಾರಿ: ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ
ಬಳ್ಳಾರಿ: ಬಾಲಮಂದಿರದಲ್ಲಿದ್ದ ಇಬ್ಬರು ಬಾಲಕರು ಅಲ್ಲಿನ ಸೆಕ್ಯುರಿಟಿ ಗಾರ್ಡ್ ಮೇಲೆ ಮಂಗಳವಾರ ಮಧ್ಯರಾತ್ರಿ ಹಲ್ಲೆ ನಡೆಸಿ, ಅವರ ಬಳಿ ಇದ್ದ ಹಣವನ್ನೂ ದೋಚಿ ಪರಾರಿಯಾಗಿದ್ದಾರೆ.
ಮಧ್ಯರಾತ್ರಿ ಗಲಾಟೆ ಮಾಡುತ್ತಿದ್ದ ಬಾಲಕರಿಗೆ ಎಚ್ಚರಿಕೆ ನೀಡಲು ಗಾರ್ಡ್ ರೆಹಮಾನ್ ಬಾಷಾ ಕೊಠಡಿಯೊಳಕ್ಕೆ ಹೋದಾಗ ಅವರು ರಾಡ್ ನಿಂದ ಹಲ್ಲೆ ನಡೆಸಿದರು.ಅವರ ಬಳಿ ಇದ್ದ ₹ 6,010 ಅನ್ನು ದೋಚಿ ಪರಾರಿಯಾದರು.
ನಂತರ ಅವರು ಪೋಷಕರ ಬಳಿಗೂ ಹೋಗಿಲ್ಲ ಎಂಬ ಮಾಹಿತಿ ಸಂಗ್ರಹಿಸಿರುವ ಕೌಲ್ ಜಾರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.