ಟಿ.ಬಿ. ಮಂಡಳಿಗೆ ನಾಗಮೋಹನ್‌ ಹೊಸ ಕಾರ್ಯದರ್ಶಿ

7

ಟಿ.ಬಿ. ಮಂಡಳಿಗೆ ನಾಗಮೋಹನ್‌ ಹೊಸ ಕಾರ್ಯದರ್ಶಿ

Published:
Updated:
Deccan Herald

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ನೂತನ ಕಾರ್ಯದರ್ಶಿಯಾಗಿ ಎಸ್‌. ನಾಗಮೋಹನ್‌ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ನಾಗಮೋಹನ್‌ ಅವರು ಈ ಹಿಂದೆ ಕೇಂದ್ರ ಜಲ ಆಯೋಗದಲ್ಲಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅವರು ಅಣೆಕಟ್ಟೆಯ ಆಡಳಿತ ಕಚೇರಿ, ಕಂಟ್ರೋಲ್‌ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಅವರನ್ನು ಮಂಡಳಿಯ ಸಿಬ್ಬಂದಿ ಹೂಗುಚ್ಛ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು.

ನಾಗಮೋಹನ್‌ ಅವರು ಮೂಲತಃ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯವರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !