ಮೂರು ವಿಭಾಗಗಳಲ್ಲಿ ಚಿತ್ರಕಲೆ ಸ್ಪರ್ಧೆ

7
ನಿವೇದಿತಾ, ವಿಜಯಶ್ರೀ ಹಾಗೂ ಸಾಯಿ ಗಣೇಶ್‌ಗೆ ಪ್ರಥಮ ಬಹುಮಾನ

ಮೂರು ವಿಭಾಗಗಳಲ್ಲಿ ಚಿತ್ರಕಲೆ ಸ್ಪರ್ಧೆ

Published:
Updated:
Deccan Herald

ಹೊಸಪೇಟೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಲ್ಲಿನ ಚಿತ್ತವಾಡ್ಗಿ ಪಿ.ಬಿ.ಎಸ್‌. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡಿತ್ತು.

ಒಂದರಿಂದ ನಾಲ್ಕನೇ ತರಗತಿ ಮಕ್ಕಳ ಸ್ಪರ್ಧೆಯಲ್ಲಿ ಮಹಿಳಾ ಸಮಾಜ ಶಾಲೆಯ ನಿವೇದಿತಾ ಆಡೂರು ಶರಣಪ್ಪ ಪ್ರಥಮ, ದೀಪಾಯನ ಶಾಲೆಯ ವಿಕಾಸ್‌ ಕಿರಣಕುಮಾರ್‌ ದ್ವಿತೀಯ ಹಾಗೂ ಸಂಕ್ಲಾಪುರದ ಡಿ.ಎ.ವಿ. ಶಾಲೆಯ ಅನೀಷ್‌ ರವೀಂದ್ರಬಾಬು ತೃತೀಯ ಬಹುಮಾನ ಗಳಿಸಿದರು. ಲಿಟ್ಲ್‌ ಫ್ಲವರ್‌ ಶಾಲೆಯ ಕೆ. ಸಾಗರ್‌ ತಿಪ್ಪೇಸ್ವಾಮಿ, ಡಿ.ಎ.ವಿ. ಶಾಲೆಯ ಪ್ರಣತಿ ರಮೇಶ್‌ ಕುಮಾರ್‌ಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಡಿ.ಎ.ವಿ. ಶಾಲೆಯ ವಿಜಯಶ್ರೀ ಶಶಿಚಂದ್ರ ಪ್ರಥಮ, ಅದೇ ಶಾಲೆಯ ಸೌಜನ್ಯ ಕೊಟ್ರೇಶ್‌ ದ್ವಿತೀಯ ಹಾಗೂ ಚಿತ್ತವಾಡ್ಗಿ ಅಶ್ವಿನಿ ಶಾಲೆಯ ಕೆ.ಬಿ. ಆದರ್ಶ ಲಿಂಗಪ್ಪ ತೃತೀಯ ಸ್ಥಾನ ಪಡೆದರು. ಮಹಿಳಾ ಸಮಾಜ ಶಾಲೆಯ ಪಿ.ಎನ್‌.ಸಿರಿ ನಾಗಭೂಷನ ಶೆಟ್ಟಿ, ಟಿ.ಬಿ. ಡ್ಯಾಂ ಶಾಲೆಯ ಶೀಫಾ ಅಮಾನುಲ್ಲಾ ಸಮಾಧಾನಕರ ಬಹುಮಾನಕ್ಕೆ ತೃಪ್ತಿ ಪಟ್ಟರು.

ಎಂಟರಿಂದ ಹತ್ತನೇ ತರಗತಿಯಲ್ಲಿ ತಾಲ್ಲೂಕಿನ ಮರಿಯಮ್ಮನಹಳ್ಳಿ ಸ್ಮಯೋರ್‌ ಶಾಲೆಯ ಸಾಯಿ ಗಣೇಶ್‌ ನಂದಕುಮಾರ್‌ ಪ್ರಥಮ, ಡಿ.ಎ.ವಿ. ಶಾಲೆಯ ಯಶಸ್ವಿನಿ ರಾಜೇಂದ್ರ ಹಾಗೂ ಅದೇ ಶಾಲೆಯ ನೇಹಾ ಶಫಿ ಉಲ್ಲಾ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು. ಮುನ್ಸಿಪಲ್‌ ಶಾಲೆಯ ಶ್ರೀದೇವಿ ಕಾಶಿನಾಥ, ಮಂಜುಳಾ ಭಾರ್ಗವಿ ಸಮಾಧಾನಕರ ಬಹುಮಾನ ಪಡೆದರು. ಒಟ್ಟು 236 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಿಗೆ ಆ. 15ರಂದು ಸಂಜೆ 6ಕ್ಕೆ ನಗರದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಗುವುದು.

ಇದಕ್ಕೂ ಮುನ್ನ ನಡೆದ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಗೌರವ ಅಧ್ಯಕ್ಷ ಕೆ. ಮಾರಗದಪ್ಪ, ಪ್ರಮುಖರಾದ ಬಿ. ಚಂದ್ರಶೇಖರ್, ಟಿ.ಕೆ.ವೆಂಕಟೇಶ್ ರೆಡ್ಡಿ, ಧನರಾಜ್, ಸುಧಾದೇವಿ, ಶಶಿಕಲಾ, ಹೇಮರೆಡ್ಡಿ, ಪ್ರಕಾಶ್, ವೀರಭದ್ರೇಶ್, ಬಸವರಾಜ್ ಲತಾ ಪತ್ತಾರ್, ಕುಬೇರ್ ಆಚಾರ್, ಬಸವರಾಜ, ಶಶಿಕಲಾ ಪಾಲ್ಗೊಂಡಿದ್ದರು. ರಂಜಾನ್.ಬಿ. ಗಣೇಶ್, ಮೋಹನ್, ರಾಜಶೇಖರ್, ರವಿಶಂಕರ್ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !