ಸೋಮವಾರ, ಜನವರಿ 27, 2020
17 °C

ವಿರೂಪಾಕ್ಷನಿಗೆ ಸುವರ್ಣ ಮುಕುಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಫಲಪೂಜಾ ಮಹೋತ್ಸವದ ಪ್ರಯುಕ್ತ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರನಿಗೆ ಶುಕ್ರವಾರ ವಿಜಯನಗರ ಕಾಲದ ನವರತ್ನ ಖಚಿತವಾದ ಸುವರ್ಣಮುಕುಟ ತೊಡಿಸಿ, ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಜನ ಬಂದು ದೇವರ ದರ್ಶನ ಪಡೆದರು. ದಿನವಿಡೀ ಭಕ್ತರು ದೇಗುಲಕ್ಕೆ ಬಂದು ಹೋದರು. 

ಶನಿವಾರ ದೇವಸ್ಥಾನದ ಅಂಗಳದಲ್ಲಿ ದೀಪೋತ್ಸವ ಕಾರ್ಯಕ್ರಮ ನೆರವೇರಲಿದೆ.

ಪ್ರತಿಕ್ರಿಯಿಸಿ (+)