ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು: ಲಾಟರಿಯಲ್ಲಿ ಪ್ರತಿ ಸ್ಪರ್ಧಿಗಳು ಆಯ್ಕೆ

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚಲಾಯಿಸಿದ ಮತವೇ ತಿರಸೃತ!
Last Updated 5 ಫೆಬ್ರುವರಿ 2021, 1:42 IST
ಅಕ್ಷರ ಗಾತ್ರ

ಕೊಟ್ಟೂರು: ತಾಲ್ಲೂಕಿನ ಚಿರಬಿ ಗ್ರಾಮ ಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪರಿಶಿಷ್ಟ ಪಂಗಡದ ಮಹಿಳೆ ದೇವಿರಮ್ಮ ಅಧ್ಯಕ್ಷರಾಗಿ, ಸಾಮಾನ್ಯ ವರ್ಗದ ಚಿನ್ಮಯನಂದ ಸ್ವಾಮಿ ಉಪಾಧ್ಯಕ್ಷರಾಗಿ ಲಾಟರಿ ಮೂಲಕ ಆಯ್ಕೆಯಾದರು.

10 ಸದಸ್ಯ ಬಲವುಳ್ಳ ಗ್ರಾಮ ಪಂಚಾಯತಿಗೆ ಒಬ್ಬ ಸದಸ್ಯ ಗೈರಾಗಿದ್ದರಿಂದ 9 ಸದಸ್ಯರ ಸಂಖ್ಯಾಬಲವಿತ್ತು. ರೇಖಾ ಹಾಗೂ ಗಂಗಾಧರಪ್ಪ ಬಣದ 5 ಮತಗಳ ಪೈಕಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರೇಖಾ ಅವರು ಬ್ಯಾಲೆಟ್ ಪತ್ರದಲ್ಲಿ ಸಹಿ ಮಾಡಿ ಮತ ಚಲಾಯಿಸಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ
ಚಲಾಯಿಸಿದ ಎರಡು ಮತಗಳು ತಿರಸ್ಕತಗೊಂಡು 4 ಮತಗಳ ಸಮಬಲವಾಯಿತು. ಲಾಟರಿ ಮೂಲಕ ಅಧ್ಯಕ್ಷರಾಗಿ ದೇವಿರಮ್ಮ ಹಾಗೂ ಉಪಾಧ್ಯಕ್ಷರಾಗಿ ಚಿನ್ಮಯನಂದಸ್ವಾಮಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಮರಿಸ್ವಾಮಿ ಕಾರ್ಯನಿರ್ವಾಹಿಸಿದರು, ಸದಸ್ಯರಾದ ಪಿ ನಾಗರಾಜ, ಎಂ ಶಾಂತಮ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಪಿ ಚನ್ನಬಸವನಗೌಡ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಸ್ ಗುರುಮೂರ್ತಿ, ಪಿ ಎಚ್ ಕೊಟ್ರೇಶ್, ಬೂದಿ ನಾಗರಾಜ ಹನುಂಮತಪ್ಪ, ಅವಿನಾಶ್, ಮೂಗಪ್ಪ, ತೂಲಹಳ್ಲಿ ನಾಗರಾಜ, ರಂಗಪ್ಪ ತೂಪಕಹಳ್ಳಿ ರಮೇಶ, ಎನ್. ತಿಪ್ಪಣ್ಣ,ವಿಶ್ವನಾಥ ಸಂತೋಶ, ಚಿರಬಿ ಕೊಟ್ರೇಶ್, ಅರವಿಂದ ಇದ್ದರು

ಉಜ್ಜಿನಿ (ಕೊಟ್ಟೂರು): ಇಲ್ಲಿನ ಗ್ರಾಮ ಪಂಚಾಯ್ತಿಗೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಹಿಂದುಳಿದ ವರ್ಗ ಆ ವರ್ಗಕ್ಕೆ ಸೇರಿದ ಪರುಶಪ್ಪ.ಕೆ, ಉಪಾಧ್ಯಕ್ಷರಾಗಿ ಪರಿಶಿಷ್ಟ ಜಾತಿ ಮಹಿಳೆ ಮಲ್ಲಕ್ಕ ಅವಿರೋಧವಾಗಿ ಆಯ್ಕೆಯಾದರು.

ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT