ಮಂಗಳವಾರ, ಮಾರ್ಚ್ 2, 2021
23 °C

ಪುರಂದರದಾಸರ 536ನೇ ಜಯಂತಿ ಅಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕಿನ ಹಂಪಿ ಪುರಂದರ ಮಂಟಪದಲ್ಲಿ ಗುರುವಾರ ಪುರಂದರದಾಸರ 536ನೇ ಜಯಂತಿ ಆಚರಿಸಲಾಯಿತು.

ಪ್ರಾಣೇಶ್‌ ಆಚಾರ್‌, ಫಣಿರಾಜ್‌ ಆಚಾರ್‌, ರವಿ ಪಾಟೀಲ ಅವರು ಗಂಗಾ ಪೂಜೆ, ಗೋ ಪೂಜೆ ನೆರವೇರಿಸಿ, ಪುರಂದರದಾಸರ ಪ್ರತಿಮೆಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ನೈವೇದ್ಯ ಸಮರ್ಪಿಸಿದರು.

ವಡಕರಾಯ ಭಜನಾ ಮಂಡಳಿ, ಕಮಲಾಪುರದ ವಿಜಯ ವಿಠಲ ಭಜನಾ ಮಂಡಳಿ, ಯಾಜ್ಞವಲ್ಕ್ಯ ಭಜನಾ ಮಂಡಳಿಗಳು ದಾಸರ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟವು. ಜಿಲ್ಲಾ ಧರ್ಮಾಚಾರ ಸಂಪರ್ಕ ಪ್ರಮುಖ ಮೋಹನ್‌ ಚಿಕ್ಕಭಟ್‌ ಜೋಷಿ ಮಾತನಾಡಿ, ‘ಪುರಂದರದಾಸರು 4 ಲಕ್ಷದ 75 ಸಾವಿರ ಕೀರ್ತನೆಗಳನ್ನು ರಚಿಸಿದ್ದಾರೆ. ಅವರ ಮಾನಸ ಪುತ್ರ ವಿಜಯದಾಸರು 25 ಸಾವಿರ ಕೀರ್ತನೆಗಳನ್ನು ಬರೆದಿದ್ದಾರೆ’ ಎಂದರು.

ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ ಮಾತನಾಡಿ, ‘ಹಂಪಿಯಲ್ಲಿ ಎರಡ್ಮೂರು ಇಲಾಖೆಗಳು ಕೆಲಸ ನಿರ್ವಹಿಸುತ್ತಿವೆ. ಹೀಗಿದ್ದರೂ ಅಲ್ಲಿನ ಸ್ಮಾರಕಗಳನ್ನು ಹಾಳುಗೆಡವಲಾಗುತ್ತಿದೆ. ಅವುಗಳಿಗೆ ಸೂಕ್ತ ರಕ್ಷಣೆ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು.

ಹಿಂದೂ ಜಾಗರಣ ವೇದಿಕೆ ವಿಭಾಗ ಪ್ರಧಾನ ಕಾರ್ಯದರ್ಶಿ ಮೌನೇಶ್ ಬಡಿಗೇರ್, ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಮಂಜುನಾಥ ಶಾನಬೋಗ್, ನವೀನ್‍ಕುಮಾರ್, ಕಾಶಪ್ಪ, ಗಂಗಾಧರ, ವೀರೇಂದ್ರಕುಮಾರ್, ಈರಣ್ಣ ಕೆ. ಪೂಜಾರ್, ಪೂಜಾರ್ ಈರಪ್ಪ, ಬಸವರಾಜ್, ಶಕುಂತಲಾ, ಉಮಾದೇವಿ, ಕಮಲಾ ಇದ್ದರು. 

ವಿಶ್ವ ಹಿಂದೂ ಪರಿಷತ್‌, ಬಜರಂಗ ದಳದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.