ರಂಗಭೂಮಿಯ ಶ್ರೇಷ್ಠ ಸಾಧಕ ರಾಘವ: ರಾಜಪ್ಪ ದಳವಾಯಿ

7
ಮೂವರು ಕಲಾವಿದರಿಗೆ ರಾಘವ ಪ್ರಶಸ್ತಿ ಪ್ರದಾನ

ರಂಗಭೂಮಿಯ ಶ್ರೇಷ್ಠ ಸಾಧಕ ರಾಘವ: ರಾಜಪ್ಪ ದಳವಾಯಿ

Published:
Updated:
Deccan Herald

ಬಳ್ಳಾರಿ: ಕನ್ನಡ ಮತ್ತು‌ ತೆಲುಗು ‌ರಂಗಭೂಮಿ‌ ಚರಿತ್ರೆಯಲ್ಲಿ ಬಳ್ಳಾರಿ ರಾಘವ ಶ್ರೇಷ್ಠ ಸಾಧಕರು ಎಂದು‌ ವಿಮರ್ಶಕ ‌ರಾಜಪ್ಪ‌ ದಳವಾಯಿ ಬಣ್ಞಿಸಿದರು.

ರಾಘವ‌‌ ಮೆಮೋರಿಯಲ್ ಅಸೋಸಿಯೇಷನ್ ನಗರದಲ್ಲಿ‌ ಗುರುವಾರ ರಾತ್ರಿ ಏರ್ಪಡಿಸಿದ್ದ ರಾಘವ ಪ್ರಶಸ್ತಿ ‌ಪ್ರದಾನ ಕಾರ್ಯಕ್ರಮ ವನ್ನು ‌ಉದ್ಘಾಟಿಸಿದ ಅವರು, ತಮ್ಮ ಹೆಸರಿನೊಂದಿಗೆ ಬಳ್ಳಾರಿ ಯ ಹೆಸರನ್ನೂ‌ ಪ್ರಖ್ಯಾತ ಗೊಳಿಸಿದ ರಾಘವ, ಕನ್ನಡ. ತೆಲುಗು‌ ಮತ್ತು‌ ಇಂಗ್ಲಿಷ್ ‌ಭಾಷೆಗಳ ‌ಮೇಲೆ ಪ್ರಭುತ್ವ ಸಾಧಿಸಿದ್ದರು ಎಂದರು.

ಕನ್ನಡ‌ ಮತ್ತು‌ ತೆಲುಗು‌ ರಂಗಭೂಮಿ ‌ಕ್ಷೇತ್ರದ ಸಾಧಕರಿಗೆ ರಾಘವ ಅವರ ಹೆಸರಿನಲ್ಲಿ ಪ್ರತಿ‌ ವರ್ಷವೂ‌ ಅಸೋಸಿಯೇಷನ್ ಪ್ರಶಸ್ತಿ‌ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಬೆಂಗಳೂರಿನಲ್ಲಿ‌ ರಾಘವ ಅವರು ಸ್ಥಾಪಿಸಿದ ಅಮೆಚ್ಯೂರ್ ಡ್ರಾಮಾ ಆರ್ಟಿಸ್ಟ್ ಅಸೋಸಿಯೇಷನ್ ರಂಗಮಂದಿರ ಕ್ಕೆ‌ಅವರ ಹೆಸರನ್ನೇ ಇಡಬೇಕು ಎಂದು ಆಗ್ರಹಿಸಿದರು.

ಪ್ರಶಸ್ತಿ‌ ಪ್ರದಾನ:  ಹುಬ್ಬಳ್ಳಿಯ ಎಚ್.ಬಿ.ಸರೋಜಮ್ಮ ಅವರಿಗೆ ರಾಜ್ಯಮಟ್ಟದ ‌ಪ್ರಶಸ್ತಿ, ಹೊಸಪೇಟೆ ಯ ರಾಜು‌ ಎಸ್ ಕುಲಕರ್ಣಿ ಮತ್ತು ಬಳ್ಳಾರಿ ಯ ಕೆ.ಎಂ.ರಂಗಮ್ಮ ಅವರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. 

ಅಸೋಸಿಯೇಷನ್ ಗೌರವ ಅಧ್ಯಕ್ಷ ಕೆ.ಚೆನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಕೋಟೇಶ್ವರರಾವ್, ರಮೇಶ ಗೌಡ ಪಾಟೀಲ್, ರಾಮಾಂಜನೇಯುಲು, ಎನ್.ಬಸವರಾಜು, ಎಸ್.ಧನಂಜಯ ಪಾಲ್ಗೊಂಡಿದ್ದರು.

ನಾಟಕ‌ ಪ್ರದರ್ಶನ: ನಂತರ ಮೋರಿಗೇರಿಯ ಕಲ್ಯಾಣ ಅಕ್ಕ ಸಂಚಾರಿ ಬಳಗದ ಕಲಾವಿದರು ಅಕ್ಕನ ಅಗ್ನಿ ಪರೀಕ್ಷೆ ನಾಟಕವನ್ನು ‌ಅಭಿನಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !