ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಬಿರುಸಿನ ಮಳೆ

Last Updated 19 ಅಕ್ಟೋಬರ್ 2019, 12:22 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ತಡರಾತ್ರಿ, ಶನಿವಾರ ಬೆಳಗಿನ ಜಾವ ಬಿರುಸಿನ ಮಳೆಯಾಗಿದೆ.

ಶುಕ್ರವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಆರಂಭಗೊಂಡ ಮಳೆ, ಶನಿವಾರ ಬೆಳಗಿನ ಜಾವದ ವರೆಗೆ ಎಡೆಬಿಡದೆ ಸುರಿದಿದೆ.

ಭಾರಿ ಮಳೆಯಿಂದ ಇಲ್ಲಿನ ಪಟೇಲ್‌ ನಗರ, ಚಪ್ಪರದಹಳ್ಳಿ, ಶಿರಸಿನಕಲ್ಲು, ಚಿತ್ತವಾಡ್ಗಿಯಲ್ಲಿ ಚರಂಡಿಗಳು ಉಕ್ಕಿ ಹರಿದು, ರಸ್ತೆಗಳು ಜಲಾವೃತವಾಗಿದ್ದವು. ಜನ ಹಾಗೂ ವಾಹನ ಸವಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪರದಾಟ ನಡೆಸಿದರು.

ಶನಿವಾರ ದಿನವಿಡೀ ಮೋಡ ಮುಚ್ಚಿಕೊಂಡಿತ್ತು. ವಾತಾವರಣ ಸಂಪೂರ್ಣ ತಂಪಾಗಿತ್ತು. ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ನಾಗೇನಹಳ್ಳಿ, ಬಸವನದುರ್ಗ, ಧರ್ಮದಗುಡ್ಡ, ಪಾಪಿನಾಯಕನಹಳ್ಳಿ, ಧರ್ಮಸಾಗರ, ಕಾಕುಬಾಳು, ವಡ್ಡರಹಳ್ಳಿ, ಸೀತಾರಾಮ ತಾಂಡ, ಚಿನ್ನಾಪುರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT