ಹೊರವರ್ತುಲ ರಸ್ತೆ ಗುಂಡಿಗಳಿಗೆ ಮೋಕ್ಷ

7
‘ಪ್ರಜಾವಾಣಿ’ ವರದಿ ಫಲಶ್ರುತಿ: ಭಾರಿ ವಾಹನಗಳ ಪ್ರವೇಶ ನಿರ್ಬಂಧ

ಹೊರವರ್ತುಲ ರಸ್ತೆ ಗುಂಡಿಗಳಿಗೆ ಮೋಕ್ಷ

Published:
Updated:
Deccan Herald

ಹೊಸಪೇಟೆ: ‘ಪ್ರಜಾವಾಣಿ’ ವರದಿಯಿಂದ ಎಚ್ಚೆತ್ತುಕೊಂಡಿರುವ ನಗರಸಭೆ, ಹೊರವರ್ತುಲ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿದೆ.

ಅಷ್ಟೇ ಅಲ್ಲ, ಭಾರಿ ವಾಹನಗಳ ಓಡಾಟವನ್ನು ತಡೆಯಲು ಬಳ್ಳಾರಿ ರಸ್ತೆಯಿಂದ ಹೊರವರ್ತುಲ ರಸ್ತೆಗೆ ಹೋಗುವ ಮಾರ್ಗದಲ್ಲಿ ಲೋಹದ ಕಮಾನುಗಳನ್ನು ನಿರ್ಮಿಸಿದೆ.

‘ಹೊರವರ್ತುಲ ರಸ್ತೆಯಲ್ಲಿ ಗುಂಡಿಗಳೇ ಗುಂಡಿ’ ಶೀರ್ಷಿಕೆಯ ಅಡಿಯಲ್ಲಿ ನ. 26ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಅನಂತಶಯನಗುಡಿಯಿಂದ ಬಳ್ಳಾರಿ ರಸ್ತೆ ವರೆಗಿನ ಹೊರವರ್ತುಲ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಭಾರಿ ವಾಹನಗಳ ಓಡಾಟದಿಂದ ಪದೇ ಪದೇ ರಸ್ತೆ ಹಾಳಾಗುತ್ತಿರುವುದು, ಅಪಘಾತಗಳು ಸಂಭವಿಸುತ್ತಿರುವುದು ಹಾಗೂ ಇಡೀ ಪ್ರದೇಶದಲ್ಲಿ ದೂಳು ಆವರಿಸಿಕೊಂಡಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !