ಶಿಷ್ಯವೇತನ ನೋಂದಣಿ, ಶೇ 55ರಷ್ಟು ಗುರಿ ಸಾಧನೆ: ಎಲ್‌.ಡಿ. ಜೋಶಿ

7

ಶಿಷ್ಯವೇತನ ನೋಂದಣಿ, ಶೇ 55ರಷ್ಟು ಗುರಿ ಸಾಧನೆ: ಎಲ್‌.ಡಿ. ಜೋಶಿ

Published:
Updated:
Deccan Herald

ಹೊಸಪೇಟೆ: ‘ತಾಲ್ಲೂಕಿನ ಖಾಸಗಿ ಹಾಗೂ ಅನುದಾನರಹಿತ ಶಾಲೆ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಸಂಬಂಧಿಸಿದ ಹೆಸರು ನೋಂದಣಿ ಪ್ರಕ್ರಿಯೆಯಲ್ಲಿ ಶೇ 55ರಷ್ಟು ಗುರಿ ಸಾಧಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಶಿ ತಿಳಿಸಿದರು.

ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಶಿಷ್ಯವೇತನ ನೋಂದಣಿ ಪ್ರಕ್ರಿಯೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಪರಿಶಿಷ್ಟ ಜಾತಿಯ 15,812, ಪರಿಶಿಷ್ಟ ಪಂಗಡದ 9,502, ಹಿಂದುಳಿದ ವರ್ಗಗಳ 16,403, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 4,848 ವಿದ್ಯಾರ್ಥಿಗಳ ಹೆಸರನ್ನು ಆಯಾ ಶಾಲೆಗಳವರು ಶಿಷ್ಯವೇತನ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿದ್ದಾರೆ. ನೋಂದಣಿಗೆ ಇದೇ 30 ಕಡೆ ದಿನವಾಗಿದೆ. ಆದರೆ, ಎಲ್ಲ ಶಾಲೆಗಳವರು ಇದೇ 15ರ ಒಳಗೆ ಎಲ್ಲ ಅರ್ಹ ವಿದ್ಯಾರ್ಥಿಗಳ ಹೆಸರುಗಳನ್ನು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಲಾ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.

‘ಯಾವ ವಿದ್ಯಾರ್ಥಿಗಳು ಆದಾಯ ಪ್ರಮಾಣ ಪತ್ರ, ಆಧಾರ್‌ ನಕಲು ಪ್ರತಿ ಕೊಟ್ಟಿಲ್ಲವೋ ಅವುಗಳನ್ನು ಸದ್ಯ ಉಳಿಸಿಕೊಳ್ಳಬೇಕು. ಯಾರ್‍ಯಾರು ದಾಖಲೆಗಳನ್ನು ಸಲ್ಲಿಸಿದ್ದಾರೋ ಅವರ ಹೆಸರು ನೋಂದಾಯಿಸಬೇಕು. ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಈಗಾಗಲೇ ಕೆಲಸ ಪೂರ್ಣಗೊಂಡಿದೆ. ಕಮಲಾಪುರ ಹಾಗೂ ನಗರದಲ್ಲಿ ಇನ್ನಷ್ಟೇ ಮುಗಿಯಬೇಕಿದೆ. ಯಾರು ಯಾವುದೇ ರೀತಿಯ ಸಬೂಬು ಹೇಳಿ, ವಿಳಂಬ ಮಾಡುವಂತಿಲ್ಲ’ ಎಂದು ತಿಳಿಸಿದರು.

ನೋಡಲ್‌ ಅಧಿಕಾರಿ ಅಮಿತ್‌ ಬಿದ್ರಿ, ಕ್ಲಸ್ಟರ್‌ ಮಟ್ಟದ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !