ಬುದ್ಧಿಮಾಂದ್ಯ ಮಕ್ಕಳಿಂದ ಹೊಸ ವರ್ಷಾಚರಣೆ

7

ಬುದ್ಧಿಮಾಂದ್ಯ ಮಕ್ಕಳಿಂದ ಹೊಸ ವರ್ಷಾಚರಣೆ

Published:
Updated:
Prajavani

ಹೊಸಪೇಟೆ: ಇಲ್ಲಿನ ಆಕಾಂಕ್ಷ ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ವಿಶೇಷ ಶಾಲೆಯಲ್ಲಿ ಶುಕ್ರವಾರ ಹೊಸ ವರ್ಷ ಆಚರಿಸಲಾಯಿತು.

ಮಕ್ಕಳು ಕೇಕ್‌ ಕತ್ತರಿಸಿ, ಪರಸ್ಪರ ವಿನಿಮಯ ಮಾಡಿಕೊಂಡರು. ಒಬ್ಬರಿಗೊಬ್ಬರು ಹೊಸ ವರ್ಷದ ಶುಭ ಕೋರಿದರು.

ವಾತ್ಸಲ್ಯ ಟ್ರಸ್ಟ್‌ ಕಾರ್ಯನಿರ್ವಾಹಕ ಕಾರ್ಯದರ್ಶಿ ಯಶಸ್ವಿನಿ ಮಾತನಾಡಿ, ‘ಟ್ರಸ್ಟ್‌ 2008ರಿಂದ ಸತತವಾಗಿ ವಿಶೇಷ ಮಕ್ಕಳ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಈ ಮಕ್ಕಳ ಬೆಳವಣಿಗೆಗೆ ಪಾಲಕರು, ಸಮಾಜ ವಿಶೇಷ ಕಾಳಜಿ ವಹಿಸಬೇಕು’ ಎಂದರು.

ಟ್ರಸ್ಟ್‌ ಉಪಾಧ್ಯಕ್ಷ ಕೆ.ಎಸ್‌. ಗುಪ್ತಾ, ಶಾಲೆಯ ಮುಖ್ಯಶಿಕ್ಷಕ ಬಸಯ್ಯ ಎಸ್‌. ಸಾಲಿಮಠ, ಲೆಕ್ಕಾಧಿಕಾರಿ ವಿ.ಎಸ್‌. ಅನೂಪ್‌ ಕುಮಾರ್‌, ಶಿಕ್ಷಕರಾದ ಶ್ರೀಕಾಂತ ಅಮಟೆ, ಎನ್‌. ದುರುಗಮ್ಮ, ನಾಗಪ್ರಭ, ಸಿಬ್ಬಂದಿ ಹುಳ್ಳಿ ಪ್ರಕಾಶ್‌, ಸಂಧ್ಯಾ, ಹುಲಿಗೆಮ್ಮ, ಗಾಳೆಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !