ಗುರುವಾರ , ಜನವರಿ 23, 2020
28 °C

ಉಡುಪಿ ಪೇಜಾವರ ಮಠದ ಶ್ರೀಗಳ ಆರೋಗ್ಯ ಸುಧಾರಣೆಗೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಆರೋಗ್ಯ ಸುಧಾರಿಸಲೆಂದು ತಾಲ್ಲೂಕಿನ ಕಮಲಾಪುರ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಲಾಯಿತು.

ಮಠದ ವ್ಯವಸ್ಥಾಪಕ ಶ್ರೀಧರಗಡ್ಡೆ ಗುರುರಾಜ್ ಮಾತನಾಡಿ, ‘ಉಡುಪಿ ಪೇಜಾವರ ಮಠದ ಶ್ರೀಗಳು ಸಮಾಜಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬೇಗ ಗುಣಮುಖರಾಗಿ ಅವರು ಇನ್ನಷ್ಟು ಸೇವೆ ಮಾಡುವಂತಾಗಲಿ’ ಎಂದು ಹಾರೈಸಿದರು.

ನಗರದ ಕಾಶಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಪೂಜೆ ಜರುಗಿತು. ಪಂಚಾಮೃತಾಭಿಷೇಕ, ಅರ್ಚನೆ ಮಾಡಲಾಯಿತು. ದೇಗುಲದ ವ್ಯವಸ್ಥಾಪಕ ಟೀಕಾಚಾರ್ಯ ಇದ್ದರು.

ನಗರದ ರಾಣಿಪೇಟೆ ರಾಘವೇಂದ್ರ ಸ್ವಾಮಿ ಮಠದಲ್ಲೂ ಪೂಜೆ ನೆರವೇರಿಸಲಾಯಿತು. ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಯೋಜನೆಯ ಜಿಲ್ಲಾ ಘಟಕದ ಸಂಚಾಲಕ ಅನಂತ ಪದ್ಮನಾಭ ರಾವ್‌, ಮಠದ ವ್ಯವಸ್ಥಾಪಕ ತಿರುಮಲೇಶ್‌, ವಿಜಯಕುಮಾರ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು