ಮಂಗಳವಾರ, ಜನವರಿ 18, 2022
15 °C

‘ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸದಿರಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದ ವಿವಿಧ ಕಡೆಗಳಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ ಆಚರಿಸಲಾಯಿತು. ಅದರ ವಿವರ ಇಂತಿದೆ.

ಷಾ ಭವರ್‌ಲಾಲ್ ಬಾಬುಲಾಲ್ ನಾಹರ್‌ ಬಿಎಡ್ ಕಾಲೇಜು:

ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಕರಿಬಸವರಾಜ ಬಾದಾಮಿ ಪುಷ್ಪಗೌರವ ಸಲ್ಲಿಸಿ, ಹಾಡು ಹಾಡಿದರು. ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿ, ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಅವರು ಅವರ ಜ್ಞಾನದ ಮೂಲಕ ವಿಶ್ವದಲ್ಲಿ ಮನೆ ಮಾತಾಗಿದ್ದರು ಎಂದರು.

ಪ್ರಾಂಶುಪಾಲ ಎನ್.ವಿಶ್ವನಾಥಗೌಡ, ಐಕ್ಯೂಎಸಿಯ ಸಂಯೋಜಕ ಡಾ. ಜಗದೀಶ, ಎನ್.ಎಸ್.ರೇವಣಸಿದ್ಧಪ್ಪ, ಪವಿತ್ರ ಕೆ, ಲಲಿತಾ. ಕೆ, ರಜಿಯಾ, ಕೌಸರ್, ತೇಜಸ್ವಿನಿ ಪಾಟೀಲ ಇದ್ದರು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು:

ಸಂಚಾರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹಾಂತೇಶ ಸಜ್ಜನ್ ಮಾತನಾಡಿ, ರಸ್ತೆ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಡೆಯಬಹುದು. ಅಮೂಲ್ಯ ಜೀವ ಉಳಿಸಬಹುದು ಎಂದರು.

ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ನಾಗಣ್ಣ ಕಿಲಾರಿ, ಐಕ್ಯೂಎಸಿ ಮುಖ್ಯಸ್ಥ ಟಿ.ಎಚ್.ಬಸವರಾಜ, ರಾಷ್ಟ್ರೀಯ ಸೇವಾ ಯೋಜನೆಯ ಕೆ.ವೆಂಕಟೇಶ್, ದೈಹಿಕ ನಿರ್ದೇಶಕ ಮಂಜುನಾಥ ಆರೆಂಟನೂರ ಇದ್ದರು.

ಪ್ರೌಢದೇವರಾಯ ತಾಂತ್ರಿಕ ಕಾಲೇಜು:

‘ಮಗುವಿನ ಗರ್ಭಾವಸ್ಥೆಯಿಂದ ಹಿಡಿದು ಮಾನವನ ಜೀವನದ ಪ್ರತಿ ಹಂತದಲ್ಲಿಯೂ ಕಾನೂನಿನ ಬಗ್ಗೆ ತಿಳವಳಿಕೆಯ  ಅವಶ್ಯಕತೆ ಇದೆ‘ ಎಂದು ಜಿಲ್ಲಾ ನ್ಯಾಯಾಧೀಶ ಶುಭವೀರ್ ಜೈನ್ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ  ಪದ್ಮ ಪ್ರಸಾದ್, ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ.ಸಂಜೀವ್ ಕುಮಾರ್, ಎ.ಕರುಣಾನಿಧಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ಪ್ರಾಂಶುಪಾಲ ಎಸ್.ಎಂ.ಶಶಿಧರ್, ಆರ್.ಬಸವರಾಜ್, ಕೆ.ವಿ.ಬಸವರಾಜ್, ಎಸ್.ಪ್ರಕಾಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು