ಭಾನುವಾರ, ನವೆಂಬರ್ 17, 2019
28 °C
ವೇಳಾಪಟ್ಟಿ, ದರ ನಿಗದಿಪಡಿಸಿ ಆದೇಶ

18ರಿಂದ ರೈಲು ಪ್ರಯಾಣ ಶುರು

Published:
Updated:

ಹೊಸಪೇಟೆ: ನಗರದಿಂದ–ಕೊಟ್ಟೂರು–ಹರಿಹರದ ಮಧ್ಯೆ ಅ. 18ರಿಂದ ರೈಲು ಸಂಚಾರ ಆರಂಭವಾಗಲಿದ್ದು, ರೈಲ್ವೆ ಇಲಾಖೆಯು ವೇಳಾಪಟ್ಟಿ ಹಾಗೂ ದರ ನಿಗದಿಪಡಿಸಿದೆ.

ಬೆಳಿಗ್ಗೆ 7.20ಕ್ಕೆ ಹರಿಹರದಿಂದ ಪಯಣ ಬೆಳೆಸುವ ರೈಲು 7.25ಕ್ಕೆ ಅಮರಾವತಿ ಕಾಲೊನಿ, 7.45ಕ್ಕೆ ದಾವಣಗೆರೆ, 8.03ಕ್ಕೆ ಅಮರಾವತಿ ಕಾಲೊನಿ, 8.22ಕ್ಕೆ ತೆಲಗಿ, 8.43 ಹರಪನಹಳ್ಳಿ, 9.05ಕ್ಕೆ ಬೆಣ್ಣೆಹಳ್ಳಿ, 9.26ಕ್ಕೆ ಕೊಟ್ಟೂರು, 9.50 ಮಾಲವಿ, 10.08 ಹಗರಿಬೊಮ್ಮನಹಳ್ಳಿ, 10.44 ಮರಿಯಮ್ಮನಹಳ್ಳಿ, 11ಕ್ಕೆ ವ್ಯಾಸ ಕಾಲೊನಿ, 11.16ಕ್ಕೆ ವ್ಯಾಸನಕೆರಿ, 11.32ಕ್ಕೆ ತುಂಗಭದ್ರಾ ಡ್ಯಾಂ, ಮಧ್ಯಾಹ್ನ 12.10ಕ್ಕೆ ಹೊಸಪೇಟೆ ತಲುಪಲಿದೆ.

ಮಧ್ಯಾಹ್ನ 12.55ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು, 1.05ಕ್ಕೆ ತುಂಗ್ರಭದ್ರಾ ಡ್ಯಾಂ, 1.09ಕ್ಕೆ ವ್ಯಾಸನಕೇರಿ, 1.19 ವ್ಯಾಸ ಕಾಲನಿ, 1.34 ಮರಿಯಮ್ಮನಹಳ್ಳಿ, 1.53 ಹಂಪಾಪಟ್ಟಣ, 2.12 ಹಗರಿಬೊಮ್ಮನಹಳ್ಳಿ, 2.32 ಮಾಲವಿ, 3.02 ಕೊಟ್ಟೂರು, 3.32 ಬೆಣ್ಣೆಹಳ್ಳಿ, 3.45 ಹರಪನಹಳ್ಳಿ, 4.10 ತೆಲಗಿ, 5.01 ಅಮರಾವತಿ ಕಾಲೊನಿ, 5.25ಕ್ಕೆ ದಾವಣಗೆರೆ, 5.44ಕ್ಕೆ ಅಮರಾವತಿ ಕಾಲೊನಿ, 6.30ಕ್ಕೆ ಹರಿಹರ ತಲುಪಲಿದೆ.

ಹೊಸಪೇಟೆಯಿಂದ ದಾವಣಗೆರೆಗೆ 155 ಕಿ.ಮೀ. ಅಂತರವಿದೆ. ಹೊಸಪೇಟೆಯಿಂದ ವ್ಯಾಸ ಕಾಲೊನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ ತಲಾ ₹10, ಮಾಲವಿಗೆ ₹15, ಕೊಟ್ಟೂರಿಗೆ ₹20, ಬೆಣ್ಣೆಹಳ್ಳಿ ಹಾಗೂ ಹರಪನಹಳ್ಳಿಗೆ ತಲಾ ₹25, ತೆಲಗಿಗೆ ₹30, ದಾವಣಗೆರೆ, ಅಮರಾವತಿ ಕಾಲೊನಿ ಮತ್ತು ಹರಿಹರಕ್ಕೆ ತಲಾ ₹35 ದರ ಇದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅ. 17ರಂದು ಬೆಳಿಗ್ಗೆ 11ಕ್ಕೆ ನಗರದ ರೈಲು ನಿಲ್ದಾಣದಲ್ಲಿ ರೈಲು ಓಡಾಟಕ್ಕೆ ಸಾಂಕೇತಿಕವಾಗಿ ಚಾಲನೆ ಕೊಡುವರು.

ಪ್ರತಿಕ್ರಿಯಿಸಿ (+)