ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಜಿಪಂ, ತಾಪಂ ಸ್ಥಾನ ಮೀಸಲು ನಿಗದಿ

Last Updated 30 ಏಪ್ರಿಲ್ 2021, 16:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯ ಚುನಾವಣಾ ಆಯೋಗವು ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸ್ಥಾನಗಳ ಮೀಸಲಾತಿ ನಿಗದಿಗೊಳಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಜಿಲ್ಲಾ ಪಂಚಾಯಿತಿ ಮೀಸಲು ವಿವರ ಇಂತಿದೆ: ವಿಜಯನಗರ ಜಿಲ್ಲಾ ಪಂಚಾಯಿತಿಯ ಒಟ್ಟು 31 ಸ್ಥಾನಗಳ ಪೈಕಿ 8 ಪರಿಶಿಷ್ಟ ಜಾತಿ, 6 ಪರಿಶಿಷ್ಟ ಪಂಗಡ, 1 ಹಿಂದುಳಿದ ವರ್ಗ ‘ಎ’ ಹಾಗೂ 16 ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಗೊಳಿಸಿದೆ.

ತಾಲ್ಲೂಕು ಪಂಚಾಯಿತಿ ಮೀಸಲು ವಿವರ ಇಂತಿದೆ: ಹೊಸಪೇಟೆ ತಾಲ್ಲೂಕಿನ ಒಟ್ಟು 9 ಸ್ಥಾನಗಳ ಪೈಕಿ 3 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡ, 4 ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಒಟ್ಟು 12 ಸ್ಥಾನಗಳಲ್ಲಿ 3 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡ, 1 ಹಿಂದುಳಿದ ವರ್ಗ ‘ಎ’, 6 ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಪಡಿಸಲಾಗಿದೆ.

ಕೂಡ್ಲಿಗಿ ತಾಲ್ಲೂಕಿನ ಒಟ್ಟು 15 ಸ್ಥಾನಗಳಲ್ಲಿ 3 ಪರಿಶಿಷ್ಟ ಜಾತಿ, 5 ಪರಿಶಿಷ್ಟ ಪಂಗಡ, 7 ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಹರಪನಹಳ್ಳಿ ತಾಲ್ಲೂಕಿನ ಒಟ್ಟು 21 ಸ್ಥಾನಗಳಲ್ಲಿ 6 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ, 11 ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿ ಮಾಡಲಾಗಿದೆ.

ಹೂವಿನಹಡಗಲಿಯ ಒಟ್ಟು 14 ಸ್ಥಾನಗಳಲ್ಲಿ 4 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ, 2 ಹಿಂದುಳಿದ ವರ್ಗದ ‘ಎ’, 7 ಸ್ಥಾನ ಸಾಮಾನ್ಯ ವರ್ಗ. ಕೊಟ್ಟೂರು ತಾಲ್ಲೂಕಿನ 11 ಸ್ಥಾನಗಳಲ್ಲಿ 3 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡ, 6 ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT