ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆಗೆ ಬಿರುಸಿನ ಮತದಾನ

Last Updated 27 ಏಪ್ರಿಲ್ 2021, 3:37 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಎಲ್ಲ 39 ವಾರ್ಡ್‌ಗಳಲ್ಲಿ ಬಿರುಸಿನಿಂದ ನಡೆದಿದೆ.

ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಮತದಾರರ ಜ್ವರ ತಪಾಸಣೆ ನಡೆಸಿದ‌ ಬಳಿಕವೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಲವೆಡೆ ಮತದಾರರನ್ನು ಓಲೈಸಿ ಮತಗಟ್ಟೆಗಳ ಬಳಿಗೆ ಕರೆದೊಯ್ಯುವ ದೃಶ್ಯಗಳೂ ಕಂಡುಬಂದವು. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, 8 ಗಂಟೆಯಿಂದಲೇ ಬಿಸಿಲು ತೀವ್ರಗೊಂಡಿದೆ.

ಮತದಾರರ ಜ್ವರ ತಪಾಸಣೆ ನಡೆಸಲಾಯಿತು
ಮತದಾರರ ಜ್ವರ ತಪಾಸಣೆ ನಡೆಸಲಾಯಿತು

ಮತಗಟ್ಟೆಗಳ ಸುತ್ತಮುತ್ತ ನೆರೆದ ಪ್ರಚಾರಕರು, ಮತದಾರರ ಗುಂಪುಗಳನ್ನು ಚದುರಿಸುವ ಪ್ರಯತ್ನ ನಡೆದಿಲ್ಲ. ‌ಪರಸ್ಪರ ಅಂತರ ಮಾಯವಾಗಿದೆ.‌

ಹಲವರು ಮಾಸ್ಕ್ ಧರಿಸದೆಯೇ ನಡೆದಾಡುತ್ತಿರುವ ದೃಶ್ಯಗಳೂ ಕಂಡುಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT