ಭಾನುವಾರ, ಜನವರಿ 26, 2020
27 °C

₹ 5 ಲಕ್ಷ ಮೌಲ್ಯದ ಗಾಂಜಾ ವಶ: ಒಬ್ಬನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಕ್ಕೆ ಅಕ್ರಮವಾಗಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಒಡಿಶಾದ ಕಿರದ್ ಮಿಶಾಲ್ (35) ಎಂಬಾತನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ₹ 5 ಲಕ್ಷ ಮೌಲ್ಯದ 15 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

‘ಆರೋಪಿಯು ಒಡಿಶಾದಿಂದ ರೈಲಿನ ಮೂಲಕ ಲಗೇಜ್‌ ಟ್ರಾವೆಲ್‌ ಬ್ಯಾಗಿನಲ್ಲಿ ಅಪಾರ ಪ್ರಮಾಣದಲ್ಲಿ ಗಾಂಜಾವನ್ನು ತುಂಬಿಸಿಕೊಂಡು ನಗರಕ್ಕೆ ಬರುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಐಟಿ ಟೆಕ್‌ ಪಾರ್ಕ್‌, ಕಾಲೇ ಜುಗಳು ಮತ್ತು ಪಿಜಿಗಳು ಇರುವ ಜನದಟ್ಟಣೆ ಪ್ರದೇಶಗಳಲ್ಲಿ ಆರೋಪಿ ಗಾಂಜಾ ಮಾರಾಟದ ಬಗ್ಗೆ ಸಿಕ್ಕಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು’ ಎಂದರು.

ಪ್ರತಿಕ್ರಿಯಿಸಿ (+)