ಬೆಂಗಳೂರು: ನಗರದ ಎಚ್‌ಎಸ್ಆರ್ ಲೇಔಟ್‌ನ ಸಾರಿಗೆ ಇಲಾಖೆ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಹರಾಜಿನಲ್ಲಿ ಹೊಸ ಎನ್‌ಬಿ ಸರಣಿಯ ನೋಂದಣಿ ಸಂಖ್ಯೆಗೆ ಭಾರೀ ಬೇಡಿಕೆ ಬಂದಿತ್ತು.
‘0001’ ನೋಂದಣಿ ಸಂಖ್ಯೆ ₹ 19.25 ಲಕ್ಷಕ್ಕೆ ಹರಾಜಾಗಿದೆ. ‘ಕೆಎ 01/ಎನ್‌ಬಿ’ ಆಕರ್ಷಕ ಸಂಖ್ಯೆಗಳ ಸಾರ್ವಜನಿಕ ಬಹಿರಂಗ ಹರಾಜಿನಲ್ಲಿ ₹ 61 ಲಕ್ಷ ರಾಜಸ್ವ ಸಂಗ್ರಹವಾಗಿದ್ದು ಬಹಿರಂಗ ಹರಾಜಿನಲ್ಲಿ 28 ಮುಂಗಡ ಸಂಖ್ಯೆಗಳನ್ನು ಹರಾಜು ಮಾಡಲಾಗಿದೆ. ಪ್ರತಿ ನೋಂದಣಿ ಸಂಖ್ಯೆಗೆ ಅರ್ಜಿ ಶುಲ್ಕ ₹ 75 ಸಾವಿರ ನಿಗದಿ ಪಡಿಸಲಾಗಿತ್ತು.
ಎನ್‌ಬಿ ‘0001’ ಸಂಖ್ಯೆಗೆ ₹ 19.25 ಲಕ್ಷ, ಎನ್‌ಬಿ ‘8055’ ಸಂಖ್ಯೆಯು ₹ 5.15 ಲಕ್ಷ, ಎನ್‌ಬಿ ‘9999’ ಸಂಖ್ಯೆಯು ₹ 5.5 ಲಕ್ಷ, ಎನ್‌ಬಿ ‘6666’ ಸಂಖ್ಯೆಗೆ ₹ 4.25 ಲಕ್ಷ, ಎನ್‌ಬಿ ‘0009’ ಸಂಖ್ಯೆಗೆ ₹ 3.70 ಲಕ್ಷ, ಎನ್‌ಬಿ ‘0999’ ಸಂಖ್ಯೆಗೆ ₹ 2 ಲಕ್ಷ, ಎನ್‌ಬಿ ‘0666’ ಸಂಖ್ಯೆಗೆ ₹ 1.80 ಲಕ್ಷಕ್ಕೆ ಹರಾಜು ಮಾಡಲಾಯಿತು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.
ಎನ್‌ಬಿ ‘8055’ ಅನ್ನು ‘ಬಾಸ್’ ಎಂದು ಪರಿಗಣಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.