ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ

Last Updated 24 ಮಾರ್ಚ್ 2023, 20:43 IST
ಅಕ್ಷರ ಗಾತ್ರ

ಬೆಂಗಳೂರು: ವೈಫೈ ಸೌಲಭ್ಯವು ಸುಗಮವಾಗಿ ಎಲ್ಲರಿಗೂ ಸಿಗಲು ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 100 ಹಾಟ್‌ಸ್ಪಾಟ್‌ ತಾಣಗಳಿಗೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು.

‘ಇಂದು ತಂತ್ರಜ್ಞಾನವು ನೀರಿ ಗಿಂತಲೂ ಹೆಚ್ಚಿನ ಮೂಲ ಅಗತ್ಯವಾಗಿದೆ. ಹೀಗಾಗಿ ಆಕ್ಟ್‌ ಫೈಬರ್‌ನೆಟ್‌ ಕಂಪನಿಯ ಸಹಯೋಗದಲ್ಲಿ ಉದ್ಯಾನ, ಮೆಟ್ರೊ ನಿಲ್ದಾಣಗಳು, ಬಸ್‌ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಮತ್ತು ಇತರ ಸಾರ್ವಜನಿಕ ತಾಣಗಳಲ್ಲಿ ಈ ಹಾಟ್‌ಸ್ಪಾಟ್‌ ಸೌಲಭ್ಯ ಕೊಡಲಾಗುತ್ತಿದೆ. ಇದರಡಿಯಲ್ಲಿ ಸಾರ್ವಜನಿಕರು 25 ಎಂಬಿಪಿಎಸ್‌ ವೇಗದಲ್ಲಿ ಕೆಲಸ ಮಾಡುವ ಇಂಟರ್‌ನೆಟ್‌ ಅನ್ನು 45 ನಿಮಿಷ ಉಚಿತವಾಗಿ ಬಳಸಿಕೊಳ್ಳ ಬಹುದು’ ಎಂದು ಸಚಿವರು ತಿಳಿಸಿದರು.

ವೈಫೈ ಅಳವಡಿಕೆಯಿಂದ ಪದೇ ಪದೇ ರಸ್ತೆ ಅಗೆಯುವ ಪ್ರಮೇಯ ತಪ್ಪಲಿದೆ. ಕಂಪನಿಯು ಒಟ್ಟು ಆರು ಕೇಬಲ್‌ ಇರುವ ಡಕ್ಟ್‌ ಅಳವಡಿಸಿದ್ದು, ಈ ಪೈಕಿ ಮೂರು ಕೇಬಲ್‌ಗಳನ್ನು ಮುಕ್ತವಾಗಿಟ್ಟಿದೆ ಎಂದು ಮಾಹಿತಿ ನೀಡಿದರು.

ಆಕ್ಟ್‌ ಫೈಬರ್‌ನೆಟ್‌ ಕಂಪನಿಯ ಸಿಇಒ ಬಾಲ ಮಲ್ಲಾಡಿ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಡಾ.ಆರ್ ಎಲ್‌ ದೀಪಕ್‌, ಡಿಸಿಪಿ ಡಿ.ದೇವರಾಜ್‌, ಬಿಬಿಎಂಪಿ ಜಂಟಿ ಆಯುಕ್ತ ಲೋಕನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT