ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಎಲೆಕ್ಟ್ರಿಕ್ ಬಸ್‌ ಸಂಚಾರ ಆರಂಭ

Last Updated 7 ಅಕ್ಟೋಬರ್ 2022, 21:11 IST
ಅಕ್ಷರ ಗಾತ್ರ

ಯಲಹಂಕ: ಕೇಂದ್ರ ಸರ್ಕಾರದ ಭಾರಿ ಕೈಗಾರಿಕಾ ಇಲಾಖೆ ಫೇಮ್-2 ಯೋಜನೆ ಅಡಿ ಪುಟ್ಟೇನಹಳ್ಳಿ ಬಿಎಂಟಿಸಿ ಘಟಕ 30ರಿಂದ 100 ಎಲೆಕ್ಟ್ರಿಕ್ ಬಸ್‌ ಸಂಚಾರಕ್ಕೆ ಕೇಂದ್ರ ಭಾರಿ ಕೈಗಾರಿಕೆ ಸಚಿವ ಡಾ.ಮಹೇಂದ್ರನಾಥ್ ಪಾಂಡೆ ಅವರು ವರ್ಚ್ಯುವಲ್‌ ಮೂಲಕ ಚಾಲನೆ ನೀಡಿದರು.

ಮೆ.ಸ್ವಿಚ್ ಮೊಬಿಲಿಟಿ ಆಟೋ ಮೋಟಿವ್ ಕಂಪನಿ ಬಸ್‌ಗಳ ನಿರ್ವಹಣೆ ನಡೆಸಲಿದೆ. ಘಟಕ-30, ಬಿಡದಿ ಘಟಕ-49 ಮತ್ತು ಚಂದಾಪುರ (ಸೂರ್ಯಸಿಟಿ), ಘಟಕ-32ರಿಂದ ಈ ಬಸ್‌ಗಳು ಸಂಚಾರ ನಡೆಸಲಿವೆ. ಪುಟ್ಟೇನಹಳ್ಳಿಯ ಘಟಕ-30ರಲ್ಲಿ 120 ಎಲೆಕ್ಟ್ರಿಕ್ ಬಸ್ಸುಗಳ ನಿರ್ವಹಣೆ, ಚಾರ್ಚಿಂಗ್‌ 3300 ಕಿಲೋವಾಟ್‌ ವಿದ್ಯುಚ್ಛಕ್ತಿ ಹಾಗೂ 14 ಚಾರ್ಚಿಂಗ್‌ ಘಟಕಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಪ್ರಥಮ ಹಂತದಲ್ಲಿ ಪುಟ್ಟೇನಹಳ್ಳಿ ಘಟಕದಿಂದ ಬಸ್ ಸೇವೆ ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿ’ ಎಂದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಮಾತನಾಡಿ, ‘ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕೆ ಈ ಬಸ್‌ಗಳು ಹೆಚ್ಚು ಸಹಕಾರಿ
ಯಾಗಲಿವೆ’ ಎಂದರು.

ಟಿ.ಪಿ. ಪ್ರಕಾಶ್, ಶ್ರೀಧರ್ ಕಲ್ಲೂರ್, ಮೆ.ಸ್ವಿಚ್ ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ ಸಚಿನ್ ನಿಜವಾನ್
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT