ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್ ಪೈಪ್‌ಲೈನ್‌ಗೆ ಹಾನಿ; 13 ಎಫ್‌ಐಆರ್‌ ದಾಖಲು

Last Updated 17 ಮಾರ್ಚ್ 2023, 22:07 IST
ಅಕ್ಷರ ಗಾತ್ರ

ಬೆಂಗಳೂರು: ಮನೆಗಳಿಗೆ ಅಡುಗೆ ಅನಿಲ ಪೂರೈಸಲು ನೆಲದಡಿ ಅಳವಡಿಸಿರುವ ಪೈಪ್‌ಲೈನ್‌ಗೆ ಹಾನಿಮಾಡಿದ್ದವರ ವಿರುದ್ಧ ಇದುವರೆಗೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 13 ಎಫ್‌ಐಆರ್‌ಗಳು ದಾಖಲಾಗಿವೆ.

ಎಚ್‌ಎಸ್‌ಆರ್‌ ಲೇಔಟ್‌ನ 7ನೇ ಹಂತದಲ್ಲಿ ಭಾರತೀಯ ಅನಿಲ ಪ್ರಾಧಿಕಾರದಿಂದ (ಗೇಲ್‌) ನೆಲದಡಿ ಅಳವಡಿಸಿದ್ದ ಪೈಪ್‌ ಒಡೆದು ಅನಿಲ್ ಸೋರಿಕೆಯಿಂದ ಎರಡು ಮನೆಗಳಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು.

ನೆಲದಡಿ ಸುಮಾರು 3 ಅಡಿಯಷ್ಟು ಅಗೆದು ಉಕ್ಕಿನ ಹಾಗೂ ಎಂಡಿಪಿ (ಮೀಡಿಯಂ ಡೆನ್ಸಿಟಿ ಪಾಲಿಇಥಲೀನ್) ಕೊಳವೆ ಅಳವಡಿಸಲಾಗಿದೆ. ಯಾರಾದರೂ ಬೇಕಾಬಿಟ್ಟಿಯಾಗಿ ನೆಲ ಅಗೆದರೆ ಕೊಳವೆಗೆ ಧಕ್ಕೆ ಆಗುವ ಸಾಧ್ಯತೆ ಹೆಚ್ಚು ಎಂದು ಗೇಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೈಪ್‌ ಇರುವ ರಸ್ತೆಗಳಲ್ಲಿ ಅಗೆಯಲು ಗೇಲ್‌ ಅಧಿಕಾರಿಗಳ ಅನುಮತಿ ಕಡ್ಡಾಯ. ಆದರೆ, ಬಿಬಿಎಂಪಿ, ಜಲಮಂಡಳಿ ಹಾಗೂ ಇತರೆ ಏಜೆನ್ಸಿಗಳು ಅಕ್ರಮವಾಗಿ ರಸ್ತೆ ಅಗೆಯುತ್ತಿವೆ. ತಪ್ಪಿತಸ್ಥರ ವಿರುದ್ಧ 2015ರಿಂದ 2023ರ ವರೆಗೆ ಗೇಲ್‌ ಅಧಿಕಾರಿಗಳು 13 ಎಫ್‌ಐಆರ್‌ ದಾಖಲಿಸಿರುವುದಾಗಿ ಗೊತ್ತಾಗಿದೆ.

ಜಲಮಂಡಳಿ, ಗೇಲ್‌ಗೆ ನೋಟಿಸ್‌: ಸ್ಫೋಟ ಪ್ರಕರಣ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಜಲಮಂಡಳಿ ಹಾಗೂ ಗೇಲ್‌ ಅಧಿಕಾರಿಗಳಿಗೆ ಶುಕ್ರವಾರ ನೋಟಿಸ್‌ ನೀಡಿದ್ದಾರೆ. ಘಟನೆಗೆ ಕಾರಣವೇನು? ಹೊಣೆಗಾರರು ಯಾರು ಎಂಬುದನ್ನು ತಿಳಿಯಲು ವಿಚಾರಣೆಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT