ಲಾರಿ ಮಾಲೀಕರ ಮುಷ್ಕರ ಏಳನೇ ದಿನಕ್ಕೆ

ಬುಧವಾರ, ಜೂಲೈ 17, 2019
27 °C

ಲಾರಿ ಮಾಲೀಕರ ಮುಷ್ಕರ ಏಳನೇ ದಿನಕ್ಕೆ

Published:
Updated:

ಬೆಂಗಳೂರು: ಸಮಗ್ರ ಮರಳು ನೀತಿ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ರಾಜ್ಯದಾದ್ಯಂತ ನಡೆಸುತ್ತಿರುವ ಮುಷ್ಕರ ಶನಿವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಲಾರಿ ಮಾಲೀಕರ ಸಮಸ್ಯೆಗಳನ್ನು ಪರಿಶೀಲಿಸಲು ಸರ್ಕಾರ ಸೋಮವಾರದವರೆಗೆ (ಜು.15) ಕಾಲಾವಕಾಶ ಕೋರಿದೆ.`ಸರ್ಕಾರದೊಂದಿಗೆ ಶನಿವಾರ ಎರಡನೇ ಸುತ್ತಿನ ಮಾತುಕತೆ ನಡೆಸಲಾಯಿತು. ಈ ವೇಳೆ ಲಾರಿ ಮಾಲೀಕರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ' ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.ಇದೇ ವೇಳೆ ಮರಳು ದೊರೆಯುವ ಜಾಗಗಳ ಬಗ್ಗೆ ಚರ್ಚೆ ಆದಾಗ, `1,600 ಮರಳು ದೊರೆಯುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸದ್ಯ 600 ಜಾಗದಲ್ಲಿ ಮರಳು ಕೊಡಲಾಗುತ್ತಿದೆ' ಎಂದು ಸಚಿವರೊಬ್ಬರು ಹೇಳಿದರು. ಆದರೆ, ಕೇವಲ ಒಂಬತ್ತು ಪ್ರದೇಶಗಳಿಂದ ಮಾತ್ರ ಮರಳು ನೀಡಲಾಗುತ್ತಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಲಾಯಿತು.

ಜತೆಗೆ ಮರಳು ಪ್ರದೇಶಗಳ ಹರಾಜು ಪ್ರಕ್ರಿಯೆ ನಡೆಸಿ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಮೂಲಕ ಮರಳು ಸಾಗಣೆಯನ್ನು ಸುಗಮಗೊಳಿಸಬೇಕು ಎಂದು ಒತ್ತಾಯಿಸಲಾಯಿತು ಎಂದರು. ಪ್ರತಿನಿತ್ಯ 10 ಸಾವಿರ ಲೋಡ್ ಮರಳು ಅಕ್ರಮವಾಗಿ ಸಾಗಣೆಯಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಲಾಗಿದೆ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry