ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಅಭ್ಯರ್ಥಿಗಳು ಕಣದಲ್ಲಿ

ಪಾಲಿಕೆ ಉಪಚುನಾವಣೆ
Last Updated 17 ಮೇ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿಪುರ ಹಾಗೂ ಸಗಾಯ‍ಪುರ ವಾರ್ಡ್‌ಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದ್ದು ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಮೀಳಾ ಉಮಾಶಂಕರ್‌ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕಾವೇರಿಪುರ ವಾರ್ಡ್‌ನಲ್ಲಿ ಐವರು ನಾಮಪತ್ರ ಸಲ್ಲಿಸಿದ್ದರು. ಒಬ್ಬರ ನಾಮಪತ್ರ ತಿರಸ್ಕೃತವಾಗಿದೆ.

ಇಲ್ಲಿ ಜೆಡಿಎಸ್‌ನ ಎನ್‌.ಸುಶೀಲ ಅವರು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ. ಬಿಜೆಪಿಯು ಸಿ.ಪಲ್ಲವಿ ಅವರನ್ನು ಕಣಕ್ಕಿಳಿಸಿದೆ. ಕಮಲಮ್ಮ ಹಾಗೂ ತೇಜಸ್ವಿನಿ ಅವರು ಪಕ್ಷೇತರ ಅಭ್ಯರ್ಥಿಗಳು.

ಬಿಜೆಪಿ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದ ಕೆ.ಅರ್ಪಿತಾ ಅವರಿಗೆ ಪಕ್ಷವು ಬಿ–ಫಾರ್ಮ್‌ ನೀಡಿರಲಿಲ್ಲ. ನಾಮಪತ್ರ ಸಲ್ಲಿಸುವಾಗ ಆರು ಮಂದಿ ಸೂಚಕರು ಇಲ್ಲದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ವಿ.ಏಳುಮಲೈ ಅವರ ನಿಧನದಿಂದ ತೆರವಾಗಿರುವ ಸಗಾಯಪುರ ವಾರ್ಡ್‌ನಲ್ಲಿ ಒಟ್ಟು 14 ಮಂದಿ ಕಣದಲ್ಲಿದ್ದಾರೆ. ಒಂದು ಅವಧಿಗೆ ಪಾಲಿಕೆ ಸದಸ್ಯೆಯಾಗಿದ್ದ ವಿ.ಪಳನಿ ಅಮ್ಮಾಳ್‌ ಅವರು ಇಲ್ಲಿ ಮೈತ್ರಿಕೂಟದ ಅಭ್ಯರ್ಥಿ. ಎ.ಜೆಯೇರಿಮ್‌ ಅವರು ಬಿಜೆಪಿ ಅಭ್ಯರ್ಥಿ. ಮೈತ್ರಿಕೂಟದಿಂದ ಟಿಕೆಟ್‌ ಬಯಸಿದ್ದ ಮಾರಿಮುತ್ತು ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಇರ್ಷಾದ್‌ ಅಹ್ಮದ್‌, ಕೆ.ಏಳುಮಲೈ, ಪಿ.ಸೆಲ್ವಿ, ಜಿ.ನಟರಾಜ್‌, ಫಿಲಿಪ್ಸ್‌ ಸ್ಟೀಫನ್‌, ಪಳನಿ, ಪುರುಷೋತ್ತಮ್‌, ಮುಜಮ್ಮಿಲ್‌ ಪಾಷಾ, ಸೈಯದ್‌ ಮಸೂದ್‌, ಎಸ್‌.ಸರವಣನ್‌, ಮೋದಿ ಸೈಫುಲ್ಲಾ ಕಣದಲ್ಲಿರುವ ಇತರ ಅಭ್ಯರ್ಥಿಗಳು. ನಾಮಪತ್ರ ಹಿಂದಕ್ಕೆ ಪಡೆಯಲು ಇದೇ 20 ಕೊನೆಯ ದಿನ. ಮತದಾನವು ಇದೇ 29ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT