ಬೆಂಗಳೂರು: ನಗದು ಹಣವನ್ನು ಡಾಲರ್ಗೆ ಪರಿವರ್ತಿಸಿಕೊಡುವುದಾಗಿ ನಂಬಿಸಿ ಉದ್ಯಮಿಯನ್ನು ಕರೆಸಿಕೊಂಡು ಮಾರಕಾಸ್ತ್ರ ತೋರಿಸಿ ಹಣ ಸುಲಿಗೆ ಮಾಡಿದ್ದ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಜಮಿನ್ ಹರ್ಷ, ರಕ್ಷಿತ್, ಪ್ರಕಾಶ್ ಹಾಗೂ ಭರತ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ₹ 2 ಕೋಟಿ ಸುಲಿಗೆ ನಡೆಸಲಾಗಿದೆ ಎಂದು ಆರೋಪಿಸಿ ಉದ್ಯಮಿ ವಿ.ಶ್ರೀಹರ್ಷ ಪೊಲೀಸರಿಗೆ ದೂರು ನೀಡಿದ್ದರು.

‘ಕೆಂಗೇರಿ ನಿವಾಸಿ ಶ್ರೀಹರ್ಷ ಅವರು ಆಯಿಲ್ ಉದ್ಯಮ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಹಣ ಇಟ್ಟುಕೊಂಡಿದ್ದರು. ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಜರ್ಮನಿಯಿಂದ ಖರೀದಿಸಬೇಕಿತ್ತು. ವಿದೇಶಿ ಕಂಪನಿಗೆ ಡಾಲರ್ ರೂಪದಲ್ಲಿ ಪಾವತಿಸಬೇಕಿದ್ದರಿಂದ ನಗದು ಪರಿವರ್ತಿಸಿಕೊಳ್ಳಲು ನಿರ್ಧರಿಸಿದ್ದರು. ಈ ವಿಚಾರ ಆರೋಪಿಗಳಿಗೆ ಗೊತ್ತಾಗಿ, ಎಂ.ಎಸ್.ಪಾಳ್ಯಕ್ಕೆ ಹರ್ಷ ಅವರನ್ನು ಕರೆಸಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಹಣ ಎಣಿಸುತ್ತಿರುವಾಗ ಐದು ಮಂದಿ ಅಪರಿಚಿತರು ಏಕಾಏಕಿ ಮಳಿಗೆಯ ಒಳಗೆ ನುಗ್ಗಿದ್ದರು. ಆಗ ಅಪರಿಚಿತರು ಮಾರಕಾಸ್ತ್ರ ತೋರಿಸಿ ₹2 ಕೋಟಿ ನಗದು ಚೀಲಕ್ಕೆ ತುಂಬಿಕೊಂಡು ಮಳಿಗೆಯ ರೋಲಿಂಗ್ ಶೆಟರ್ ಹಾಕಿ ಪರಾರಿ ಆಗಿದ್ದರು’ ಎಂದು ಶ್ರೀಹರ್ಷ ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.